ಮೈಸೂರು

ಮೈಸೂರು ಜಿಲ್ಲೆಯಲ್ಲಿ ಒಂದೇ ದಿನ 51 ಕೊರೋನಾ ಪಾಸಿಟಿವ್ ಪ್ರಕರಣ ದೃಢ

ಮೈಸೂರು,ಜು.2:- ಮೈಸೂರು ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 51 ಕೊರೋನಾ ಪಾಸಿಟಿವ್ ಪ್ರಕರಣ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 321ಕ್ಕೇರಿದೆ.

ಹೊಸದಾಗಿ ಕಂಡು ಬಂದ 51ಪ್ರಕರಣಗಳಲ್ಲಿ 21ಮಂದಿ   ಕೆಎಸ್ ಆರ್ ಪಿ 5ನೇ ಬೆಟಾಲಿಯನ್ ನ ಸಿಬ್ಬಂದಿಗಳು, ಪಿರಿಯಾಪಟ್ಟಣ ಮಹಿಳಾ ಕೆಎಎಸ್ ಅಧಿಕಾರಿಯ 13ವರ್ಷದ ಪುತ್ರಿಗೂ ಸೋಂಕು ತಗುಲಿದೆ. ವಿಶ್ವೇಶ್ವರ ನಗರದ ಕೈಗಾರಿಕಾ ಪ್ರದೇಶದ ಅ     6ಪಾರ್ಟ್ಮೆಂಟ್ ನ ಮನೆಯೊಂದರಲ್ಲಿ ವಾಸಿಸುತ್ತಿದ್ದ 6ಮಂದಿ, ಚಾಮಲಾಪುರ ಹುಂಡಿಯ ಮೂವರು, ಹರಾ ಗ್ರಾಮದ ಮೂವರಿಗೆ ಸೋಂಕು ತಗುಲಿದೆ.

ಬೆಂಗಳೂರಿನಿಂದ ಹುಣಸೂರು ತಾಲೂಕಿನ ದಲ್ಲಾಲ್ ಕೊಪ್ಪಲು ಗ್ರಾಮಕ್ಕೆ ಬಂದಿದ್ದ ಯುವಕ, ರಾಜೀವ್ ನಗರದ ವೃದ್ಧ, ಯಾದವಗಿರಿಯ 38ವರ್ಷದ ವ್ಯಕ್ತಿ , ವಾಸು ಬಡಾವಣೆಯ ವೃದ್ಧರೋರ್ವರಿಗೆ ಸೋಂಕು ತಗುಲಿದೆ.

ಈ ಮೂಲಕ ಸೋಂಕಿತರ ಸಂಖ್ಯೆ 321ಕ್ಕೇರಿದ್ದು, ನಿನ್ನೆ 13 ಮಂದಿಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 191ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 127ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: