ಪ್ರಮುಖ ಸುದ್ದಿಮನರಂಜನೆ

ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ಇನ್ನಿಲ್ಲ

ರಾಜ್ಯ(ಬೆಂಗಳೂರು)ಜು.2:- ಕಿಡ್ನಿ ಮತ್ತು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಮಿಮಿಕ್ರಿ ರಾಜಗೋಪಾಲ್‌ ಅವರು ನಿನ್ನೆ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಅವರಿಗೆ 69ವರ್ಷ ವಯಸ್ಸಾಗಿತ್ತು.  650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವಲ್ಲದೆ, ವೇದಿಕೆಗಳಲ್ಲಿ ಮಿಮಿಕ್ರಿ ಮಾಡುವ ಮೂಲಕವೂ ಅವರು ಫೇಮಸ್‌ ಆಗಿದ್ದರು.

ಕೆಂಗೇರಿಯ ಬಿಡಿಎ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಾಜಗೋಪಾಲ್‌   ಮೂವರು ಪುತ್ರಿಯರನ್ನು, ಅಪಾರ ಅಭಿಮಾನಿಗಳನ್ನು  ಅಗಲಿದ್ದಾರೆ. ಕನ್ನಡದ ಹಲವು ಜನಪ್ರಿಯ ಹೀರೋಗಳ ಜೊತೆ ಅವರು ತೆರೆ ಹಂಚಿಕೊಂಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಅವಕಾಶಗಳು ಕಡಿಮೆ ಆದ ಪರಿಣಾಮ ರಾಜಗೋಪಾಲ್‌ ತೆರೆಮರೆಗೆ ಸರಿದಿದ್ದರು. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: