ಮೈಸೂರು

ಬುಡಸಮೇತ ಉರುಳಿದ ಮರ : ಮೂರು ವಾಹನಗಳು ಜಖಂ

ಮೈಸೂರಿನ ಕುವೆಂಪುನಗರ ಎರಡನೇ ಅಡ್ಡ ರಸ್ತೆಯ ಲವ-ಕುಶ ಉದ್ಯಾನವನದ ಬಳಿ ಮನುಜಪಥ ರಸ್ತೆಯಲ್ಲಿ ಮಧ್ಯಾಹ್ನ ಜೋರಾಗಿ ಬೀಸಿದ ಗಾಳಿಗೆ ಬೃಹತ್ ಮರವೊಂದು ಬುಡಸಮೇತ ಕಿತ್ತು ಬಿದ್ದ ಕಾರಣ ರಸ್ತೆಯ ಬದಿಯಲ್ಲಿ ನಿಲ್ಲಿಸಿದ ಮೂರು ವಾಹನಗಳು ನಜ್ಜುಗುಜ್ಜಾಗಿವೆ.

ಮನುಜಪಥ ರಸ್ತೆಯಲ್ಲಿ ಮಧ್ಯಾಹ್ನ ಬೀಸಿದ ಗಾಳಿಗೆ ಮರವೊಂದು ಬುಡಸಮೇತ ಕಿತ್ತು ಬಿದ್ದಿದ್ದೆ. ಇದರ ಪರಿಣಾಮ ಮರದ ಹತ್ತಿರ ನಿಲ್ಲಿಸಲಾದ ಮೂರು ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಅಲ್ಲೆ ಎದುರಿಗೆ ಇರುವ ಮನೆಯೊಂದರ ಕಂಪೌಂಡ್ ಬಿರುಕು ಬಿಟ್ಟಿದೆ. ಬಿದ್ದಿರುವ ಮರವನ್ನು ಮಹಾನಗರಪಾಲಿಕೆ ಧನುಷ್ ತಂಡ ಆಗಮಿಸಿ ತೆರವುಗೊಳಿಸುತ್ತಿದೆ. ಕುವೆಂಪುನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: