ಮೈಸೂರು

ಸ್ಕೂಟರ್ ನಲ್ಲಿ ಅಕ್ರಮ ಮದ್ಯಸಾಗಣೆ : ಮದ್ಯ ವಶ

ಸ್ಕೂಟರ್ ನಲ್ಲಿ  ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ವೇಳೆ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್.ಕಟ್ಟೇರಿ ಗ್ರಾಮದ ಬಳಿ ವ್ಯಕ್ತಿಯೋರ್ವ ಸ್ಕೂಟರಿನಲ್ಲಿ ಅಕ್ರಮ ಮದ್ಯವನ್ನು ಸಾಗಿಸುತ್ತಿದ್ದ. ಮಾರ್ಗದಲ್ಲಿ ಸಾಗುತ್ತಿದ್ದ ವೇಳೆ ಪೊಲೀಸರು ಎದುರಾಗಿದ್ದು, ಪೊಲೀಸರನ್ನು ಕಂಡು ಹೆದರಿದ ವ್ಯಕ್ತಿ ಸ್ಕೂಟರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸ್ಕೂಟರ್ ನಲ್ಲಿದ್ದ 14 ಸಾವಿರ  ವಿವಿಧ ಕಂಪನಿಯ ಅಕ್ರಮ ಮದ್ಯದ ಪ್ಯಾಕೇಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: