ಮೈಸೂರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ

ಮೈಸೂರು,ಜು.3:- ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಹಾಗೂ ತಾಲೂಕು ಕಛೇರಿಗಳ ಎದುರಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಕೋವಿಡ್-19 ಹೆಸರಿನಲ್ಲಿ ಮುಚ್ಚಿರುವ ಎಲ್ಲಾ ಕೈಗಾರಿಕೆ, ಸಂಸ್ಥೆಗಳನ್ನು ತೆರೆದು ಎ್ಲಲರಿಗೂ ಉದ್ಯೋಗ ನೀಡಬೇಕು. ವೇತನ ಪಾವತಿಸಬೇಕು. ಮಂಚೂಣಿಯ ಆರೋಗ್ಯ ಯೋಧರಿಗೆ ಸುರಕ್ಷತಾ ಕ್ರಮಗಳನ್ನು ಒದಗಿಸಬೇಕು. ಹಿಂದಿರುಗಿರುವ ಎಲ್ಲಾ ವಲಸೆ ಕಾರ್ಮಿಕರಿಗೆ ಕೆಲಸದ ಖಾತ್ರಿ ಒದಗಿಸಬೇಕು. ಎಲ್ಲಾ ಆದಾಯ ರಹಿತ ತೆರಿಗೆ ಪಾವತಿಗಳ ಕುಟುಂಬಗಳಿಗೆ ಮೂರು ತಿಂಗಳವರೆಗೆ ಮಾಸಿಕ 7500ರೂ.ನಗದು ವರ್ಗಾವಣೆ ಮಾಡಬೇಕು. ಯೋಜನಾ ಕಾರ್ಮಿಕರಿಗೆ ಗೌರವ ಧನ ನೀಡಬೇಕು. ವಲಸೆ  ಎಕಾರ್ಮಿಕರನ್ನು ಒಳಗೊಳ್ಳಲು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚಿಸಿ ನಗರ ಪ್ರದೇಶಕ್ಕೆ ವಿಸ್ತರಿಸಬೇಕು. ಪೂರ್ಣ ವೇತನದೊಂದಿಗೆ ಉದ್ಯೋಗಗಳನ್ನು ಮರುಸ್ಥಾಪಿಸಿ ಮತ್ತು ಲಾಕ್ ಡೌನ್ ಅವಧಿಗೆ ಸಂಬಳ ಪಾವತಿಸಬೇಕು. ಲಾಕ್ ಡೌನ್ ಅವಧಿಯಲ್ಲಿ ಕೆಲಸದಿಂದ ತೆಗೆದುಹಾಕಿದವರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ 6ತಿಂಗಳವರೆಗೆ ಪಡಿತರ ಒದಗಿಸಬೇಕು. ಕೋವಿಡ್-19 ನ್ನುವೈದ್ಯಕೀಯ ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ಕಾನೂನು ಮತ್ತು ಸುವ್ಯವಸ್ಥೆಯ ವಿಷಯವಾಗಿ ಪರಿಗಣಿಸಬಾರದು. ಖಾಸಗೀಕರಣದ ನಡೆಯನ್ನು ಕೈಬವಿಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಕೈಬಿಡಬೇಕು. ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಮತ್ತು ಪಿಂಚಣಿದಾರರಿಗೆ ಡಿಎ ಮರುಸ್ಥಾಪಿಸಬೇಕು. ಕಾರ್ಮಿಕ ಕಾನೂನುಗಳನ್ನು ಬದಲಾಯಿಸಬೇಕು. ಕಾರ್ಪೋರೇಟ್ ಭೂಮಾಲೀಕರಿಗೆ ಅನುಕೂಲಕರವಾದ ಕೃಷಿ ಆರ್ಥಿಕತೆಯಲ್ಲಿ ಬದಲಾವಣೆಗಳನ್ನು ಕೈಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ಮೇಟಿ, ಹೆಚ್.ಆರ್.ಶೇಷಾದ್ರಿ, ಜೆ.ಜಯರಾಂ, ಅನಿಲ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: