ಕ್ರೀಡೆವಿದೇಶ

2011ರ ವಿಶ್ವಕಪ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ: ಕುಮಾರ್ ಸಂಗಕ್ಕರ ವಿಚಾರಣೆ

ಕೊಲೊಂಬೊ,ಜು.3-2011 ರ ವಿಶ್ವಕಪ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕರ ಅವರನ್ನು 10 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

ಕುಮಾರ್ ಸಂಗಕ್ಕರ ಅವರನ್ನು ಅಲ್ಲಿನ ಅಧಿಕಾರಿಗಳು 10 ಗಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದು, ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಸಂಗಕ್ಕರ ಅವರ ವಿಚಾರಣೆ ಮುಂದಿನ ವಾರ ನಡೆಯಬೇಕಿತ್ತು. ಆದರೆ ಅವರ ಮನವಿ ಮೇರೆಗೆ ತ್ವರಿತ ವಿಚಾರಣೆ ನಡೆಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011 ರ ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಅರವಿಂದ ಡಿ ಸಿಲ್ವಾ ಹಾಗೂ ಕ್ರಿಕೆಟಿಗ ಉಪುಲ್ ತರಂಗ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಸಂಗಕ್ಕರ ಅವರನ್ನು ವಿಚಾರಣೆಗೊಳಪಡಿಸಿರುವುದನ್ನು ವಿರೋಧಿಸಿ ಲಂಕಾದ ಯುವ ಸಂಘಟನೆ ಸಮಗಿ ತರುಣ ಬಾಲವೇಗಯಾದ ಯುವಕರು ಎಸ್ಎಲ್ ಸಿ ಕಚೇರಿಯ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದು ಖ್ಯಾತ ಕ್ರಿಕೆಟ್ ಪಟು ಸಂಗಕ್ಕರಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

2011 ರ ವಿಶ್ವಕಪ್ ಟೂರ್ನಿಯ ಫೈನಲ್ಸ್ ನಲ್ಲಿ ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವನ್ನು ಲಂಕಾ ತಂಡದ ವಿರುದ್ಧ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಮಾಡಿದ್ದರು. ಆ ವೇಳೆ ಲಂಕಾ ತಂಡವನ್ನು ಕುಮಾರ್ ಸಂಗಕ್ಕರ ಲಂಕಾ ತಂಡವನ್ನು ಮುನ್ನಡೆಸಿದ್ದರು.

ಆದರೆ ಆರೋಪಕ್ಕೆ ಸಂಬಂಧಿಸಿದ್ದಂತೆ ಸೂಕ್ತ ಸಾಕ್ಷ್ಯಾಧಾರಗಳನ್ನೇನು ನೀಡಿರಲಿಲ್ಲ. ಆದರೂ ಶ್ರೀಲಂಕಾದ ಕ್ರೀಡಾ ಸಚಿವಾಲಯ ಈ ಸಂಬಂಧ ತನಿಖೆ ಪ್ರಾರಂಭಿಸಿತ್ತು. (ಎಂ.ಎನ್)

 

 

 

 

Leave a Reply

comments

Related Articles

error: