ಮನರಂಜನೆ

ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ಆಲ್ಬಂ ಲೋಕಾರ್ಪಣೆ

ಹೈದರಾಬಾದ್: ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಬಾಹುಬಲಿ-2 ಚಿತ್ರದ ಆಡಿಯೋ ಆಲ್ಬಂ ಲೋಕಾರ್ಪಣೆಗೊಂಡಿದೆ.

ಹೈದರಾಬಾದ್‍ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆದ ಬಾಹುಬಲಿ ಪ್ರಿ ರಿಲೀಸ್ ಕಾರ್ಯಕ್ರಮದ ಆಡಿಯೋ ಆಲ್ಬಂ ಬಿಡುಗಡೆಯಾಗಿದೆ.ಬಾಹುಬಲಿ-2 ಆಡಿಯೋ ವನ್ನು ದಕ್ಷಿಣ ಭಾರತದ ಖ್ಯಾತ ಆಡಿಯೋ ಕಂಪನಿ ಲಹರಿ ಮ್ಯೂಸಿಕ್ ತರುತ್ತಿದ್ದು, 5 ಹಾಡುಗಳು ಬಿಡುಗಡೆಯಾಗಿದೆ.ಎಸ್.ಎಸ್.ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಎಮ್.ಎಮ್ ಕೀರವಾಣಿ ಸಂಗೀತ ಸಂಯೋಜನೆ ಮಾಡಿದ್ದಾರೆ. ದಲಾರ್ ಮೆಹೆಂದಿ, ಕೀರವಾಣಿ, ಕಾಲ ಭೈರವ, ಶ್ರೀನಿಧಿ, ಶ್ರೀ ಸೌಮ್ಯ ಮುಂತಾದವರು ಹಾಡಿದ್ದಾರೆ.ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ವಿಜಯೇಂದ್ರ ಪ್ರಸಾದ್, ರಾಜಮೌಳಿ, ರಮ್ಯಕೃಷ್ಣ, ಕರಣ್ ಜೋಹರ್ ಉಪಸ್ಥಿತರಿದ್ದರು.ಬಾಹುಬಲಿ ಟ್ರೇಲರ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದು, ಈಗಾಗಲೇ ನಾಲ್ಕು ಭಾಷೆಯಲ್ಲಿ 10 ಕೋಟಿಗೂ ಅಧಿಕ ಜನರನ್ನು ತಲುಪಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: