ಮೈಸೂರು

ಕೊಂಡ ಹಾಯುವಾಗ ಕಾಲು ಜಾರಿ ಅವಘಡ

ಕೊಂಡ ಹಾಯುವಾಗ ಕಾಲು ಜಾರಿ ಕೊಂಡದಲ್ಲಿ ದೇವರ ಗುಡ್ಡಪ್ಪ ಬಿದ್ದ ಘಟನೆ ಮಂಡ್ಯಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯದ ಬಸರಾಳುವಿನಲ್ಲಿ ಭಾನುವಾರ  ಭೈರವೇಶ್ವರ ದೇವರ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಇಲ್ಲಿ ಕೊಂಡ ಹಾಯುವ ಪದ್ಧತಿಯಿತ್ತು. ಆದರೆ ಕೊಂಡ ಹಾಯುವಾಗ ನಿಯಂತ್ರಣ ತಪ್ಪಿದ ದೇವರಗುಡ್ಡಪ್ಪ ಕೊಂಡದಲ್ಲಿ ಬಿದ್ದಿದ್ದಾನೆ.ಸುಮಾರು ನೂರು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಆಚರಣೆಯಲ್ಲಿ ಇದೇ ಮೊದಲ ಬಾರಿಗೆ ದುರ್ಘಟನೆ ನಡೆದುಬಿಟ್ಟಿದೆ. ಇದರಿಂದ ಗ್ರಾಮಕ್ಕೆ ಅನಿಷ್ಠ ಕಾದಿದೆ ಎಂದು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ. ಕೊಂಡೊತ್ಸವ ನಡೆಯುತ್ತಿರುವಾಗ ಆ್ಯಂಬುಲೆನ್ಸ್ ವ್ಯವಸ್ಥೆಯನ್ನೂ ಕೂಡ ಮಾಡಿರಲಿಲ್ಲ ಎಂದು ಗ್ರಾಮಸ್ಥರು  ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: