ಮೈಸೂರು

ಕೆ.ಆರ್. ನಗರದ 22 ನೇ ವಾರ್ಡ್ ನ ಕಂಟೈನ್ ಮೆಂಟ್ ನಾಗರಿಕರಿಗೆ ದಿನಸಿ ವಿತರಿಸಿದ ಸಾ.ರಾ.ಸ್ನೇಹ ಬಳಗ

ಮೈಸೂರು,ಜು.3:- ಕೆ.ಆರ್. ನಗರದ 22 ನೇ ವಾರ್ಡ್ ನಲ್ಲಿ ಕೊರೋನಾ ಸೋಂಕು ಪ್ರಕರಣ ಪತ್ತೆ ಆದಕಾರಣ ಆ ಏರಿಯಾದ ಕೆಲ ರಸ್ತೆಗಳನ್ನು ಸೀಲ್ ಡೌನ್ ಮಾಡಿ  ಕಂಟೈನ್ಮೆಂಟ್  ಜೋನ್ ಎಂದು ಘೋಷಿಸಲಾಗಿದೆ.

ಅಲ್ಲಿಯ ಜನಗಳ ಕಷ್ಟಗಳಿಗೆ ಸ್ಪಂದಿಸುವ ಕಾರಣದಿಂದಾಗಿ ಆ  ಕಂಟೈನ್ಮೆಂಟ್ ಜೋನ್ ನಲ್ಲಿರುವ ಎಲ್ಲಾ ಕುಟುಂಬಗಳಿಗೆ ಅಗತ್ಯವಾದ ದಿನಸಿ ಪದಾರ್ಥಗಳನ್ನು ಶಾಸಕ ಸಾ.ರಾ. ಸ್ನೇಹ ಬಳಗದಿಂದ ವಿತರಿಸಲಾಗಿದೆ. ಅಲ್ಲಿನ ಯಾವುದೇ ನಾಗರಿಕರು ಆತಂಕ ಪಡದೆ ಧೈರ್ಯದಿಂದ ಇರಬೇಕಾಗಿ  ಶಾಸಕ ಸಾ.ರಾ.ಮಹೇಶ್ ವಿನಂತಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: