ಮೈಸೂರು

ಇಂದಿನಿಂದ ಸಂಜೆ 6ರಿಂದ ಬೆಳಿಗ್ಗೆ 5ಗಂಟೆಯವರೆಗೆ ಕರ್ಫ್ಯೂ : ಪ್ರತಿ ಅಂಗಡಿಗಳಿಗೆ ತೆರಳಿ ಅರಿವು ಮೂಡಿಸಿದ ಪರಿಸರ ಸ್ನೇಹಿ ತಂಡ

ಮೈಸೂರು,ಜು.3:-  ಮೈಸೂರಿನಲ್ಲಿ ಮಹಾಮಾರಿ ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಸಂಜೆ 6  ರಿಂದ ಬೆಳಿಗ್ಗೆ 5 ಗಂಟೆ ವರೆಗೂ ಸರ್ಕಾರ ನೀಡಿರುವ ಆದೇಶವನ್ನು ದಯಮಾಡಿ ಸಂಪೂರ್ಣ ಲಾಕ್ ಡೌನ್ ಮಾಡುವ ಉದ್ದೇಶದಿಂದ ಪರಿಸರ ಸ್ನೇಹಿ ತಂಡದ ವತಿಯಿಂದ ಗಾಯಿತ್ರಿಪುರಂ ನ ಪ್ರತೀ ಅಂಗಡಿಗಳಿಗೆ ತೆರಳಿ ಗುಲಾಬಿ ಹೂವನ್ನು ನೀಡಿ ದಯಮಾಡಿ ಸಂಜೆ ಆರು ಗಂಟೆ ಮೇಲೆ ಅಂಗಡಿಗಳನ್ನು ತೆರೆಯಬೇಡಿ ಎಂದು ಮನವಿ ಮಾಡಿ ಅರಿವು ಮೂಡಿಸಲಾಯಿತು.
ಬಿಜೆಪಿ ಮುಖಂಡರಾದ ಡಿ.ಲೋಹಿತ್ ಮಾತನಾಡಿ ದಿನೇ ದಿನೇ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಹೆಚ್ಚುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಪೊಲೀಸ್ ಆಯುಕ್ತರು ಹೊಸ ಆದೇಶ ಹೊರಡಿಸಿದ್ದಾರೆ.  ಅದನ್ನು ನಾವೆಲ್ಲರೂ ಪಾಲಿಸುವುದು ನಮ್ಮ ಆದ್ಯ ಕರ್ತವ್ಯ ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಸರ್ಕಾರ ಹೇಳುತ್ತಿರುವುದು ನಮ್ಮ ಹಿತಕ್ಕಾಗಿ. ವ್ಯಾಪಾರಾನೇ ಮುಖ್ಯವಲ್ಲ ಜೀವನ ಸಹ ಮುಖ್ಯವಾಗಿದೆ. ಹಾಗಾಗಿ ನಾವು ಈಗ ಜೀವನ ಮಾಡುತ್ತಿರುವುದು ಕೊರೋನಾ ವೈರಸ್ ಜೊತೆ. ಆದ್ದರಿಂದ ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಿ. ಬೇಜಾವಾಬ್ದಾರಿ ಇಂದ ಅನವಶ್ಯಕವಾಗಿ ಓಡಾಡಿದರೆ ಬಹಳ ತೊಂದರೆ ಯಾಗುತ್ತದೆ. ಕೊರೋನಾ ವೈರಸ್ ತಡೆಗಟ್ಟಲು ಪ್ರತಿಯೊಬ್ಬ ವ್ಯಕ್ತಿಯೂ ಸಹಕರಿಸಬೇಕು. ತಮ್ಮ ತಮ್ಮ ಮನೆಯಲ್ಲಿ ಇರಬೇಕು. ಆದಷ್ಟು ಹೊರಗಡೆ ಓಡಾಡುವುದನ್ನು ನಿಲ್ಲಿಸಬೇಕು. ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರೆ ಕೊರೋನಾ  ವೈರಸ್ ಅನ್ನು ತಡೆಗಟ್ಟಬಹುದು ಎಂದರು.
ನಮಗಾಗಿ ಹಗಲು ಇರುಳು ದುಡಿಯುತ್ತಿರುವ ಕಾರಣ  ಕೊರೋನಾ ವಾರಿಯರ್ಸ್ ನ್ನು ಬೆಂಬಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ   ನವೀನ್ ಶೆಟ್ಟಿ ,ರಾಜು,ಸಂತೋಷ್,ಜಯಂತ್ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: