ಮೈಸೂರು

ಪ್ರತಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆ ಪಾಲಿಕೆ ವ್ಯಾಪ್ತಿಯಲ್ಲಿ ಷರತ್ತುಗಳಿಗೆ ಒಳಪಟ್ಟು ಅನುಷ್ಠಾನ : ಹೆಚ್ಚುವರಿ ಆಯುಕ್ತ ಶಶಿಕುಮಾರ್

ಮೈಸೂರು,ಜು.3:- ಕೋವಿಡ್-19 ಅವಧಿಯಲ್ಲಿ ತೊಂದರೆಗೊಳಗಾದ ಬೀದಿ ಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕರಣಕ್ಕಾಗಿ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆ ಯನ್ನು ಪ್ರಧಾನಮಂತ್ರಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಅದರಂತೆ ಸದರಿ ಯೋಜನೆಯ ಮುಖ್ಯ ಉದ್ದೇಶವು ಬೀದಿ ವ್ಯಾಪಾರಸ್ಥರಿಗೆ ಕೈಗೆಟುಕುವ ದರದಲ್ಲಿ ಕಿರು ಸಾಲ ಸೌಲಭ್ಯವನ್ನು 10ಸಾವಿರ ರೂ. ವರೆಗೆ ನೀಡುವುದರ ಜೊತೆಗೆ ನಿಯಮಿತ ಸಾಲ ಮರುಪಾವತಿಗೆ ಉತ್ತೇಜಿಸುವುದು ಹಾಗೂ ಡಿಜಿಟಲ್ ವಹಿವಾಟಿಗೆ ಉತ್ತೇಜಿಸಿ ಬಹುಮಾನವನ್ನು ಸಹ ನೀಡುವುದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜು.1ರಿಂದ ಮಾರ್ಚ್ 31, 2022ರವರೆಗೆ ಅಭಿಯಾನದ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಅದರಂತೆ ಪ್ರತಿ ಬೀದಿ ಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ ಯೋಜನೆಯನ್ನು ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಷರತ್ತುಗಳಿಗೆ ಒಳಪಟ್ಟು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಹಾನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು ಈ ಯೋಜನೆಯನ್ನು ಬೀದಿ ಬದಿ ವ್ಯಾಪಾರಿಗಳ ಅಧಿನಿಯಮ 2014 ನಿಯಮ-2019 ಯೋಜನೆ 2020ರಂತೆ ಹೊರಡಿಸಲಾಗಿರುವ ಅಧಿಸೂಚನೆ ಪ್ರಕಾರ  ಕ್ರಮವಹಿಸಲಾಗುವುದು. ಅದರಂತೆ ಮಾರ್ಚ್ 24,2020ರ ಒಳಗಾಗಿ ನಗರ ಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗಳಾಗಿ ಗುರುತಿಸಲ್ಪಟ್ಟು ಗುರುತಿನ ಚೀಟಿ ಮತ್ತು ಮಾರಾಟ ಪ್ರಮಾಣ  ಪತ್ರ ಹೊಂದಿರುವವರು ಹಾಗೂ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಇತರೆ ಬೀದಿ ಬದಿ ವ್ಯಾಪಾರಿಗಳು ಸಹ ಬ್ಯಾಂಕ್ ಗಳಿಂದ ಸಾಲ ಪಡೆಯಲು ಅರ್ಹರಿರುತ್ತಾರೆ. ಪ್ರತಿ ಬೀದಿ ಬದಿ ವ್ಯಾಪಾರಿಗಳಿಗೆ 10,000ರೂ. ವರೆಗೆ ವಾರ್ಷಿಕ ಶೇ.7ರಷ್ಟು ಬಡ್ಡಿ ದರದಲ್ಲಿ ಸಾಲ ಪಡೆಯಬಹುದಾಗಿರುತ್ತದೆ. ಎಲ್ಲಾ ವಾಣಿಜ್ಯ  ಬ್ಯಾಂಕ್ ಗಳು, ಆರ್ ಆರ್ ಬಿ ಗಳು, ಎಸ್ ಎಫ್ ಬಿಗಳು , ಸಹಕಾರಿ ಬ್ಯಾಂಕುಗಳು,ಎನ್ ಬಿ ಎಫ್ಸ್ ಗಳು, ಎಂಎಫ್ ಐಗಳು ಮತ್ತು ಎಸ್ ಎಚ್ ಜಿ ಬ್ಯಾಂಕುಗಳು ಸಾಲ ನೀಡುವ ಸಂಸ್ಥೆಗಳಾಗಿವೆ. ಈ ಯೋಜನೆಯಡಿ ಸಾಲ ಪಡೆಯಲು ಇಚ್ಛಿಸುವ ಬೀದಿ ಬದಿ ವ್ಯಾಪಾರಿಗಳು ಸಂಬಂಧಿಸಿದ ಬ್ಯಾಂಕ್ ಗಳಿಗೆ ಅರ್ಜಿ ಸಲ್ಲಿಸಿ ಅವಶ್ಯಕ ದಾಖಲಾತಿಗಳ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ/ವ್ಯಾಪಾರ ಪ್ರಮಾಣ ಪತ್ರ/ ಚುನಾವಣಾ ಗುರುತಿನ ಚೀಟಿ/ಆಧಾರ್ ಕಾರ್ಡ್/ರೇಷನ್ ಕಾರ್ಡ್/ಆದಾಯ ಪ್ರಮಾಣ ಪತ್ರ/ಭಾವಚಿತ್ರ ಇತ್ಯಾದಿಗಳನ್ನು ನೀಡಿ ಸಾಲ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ಸಿ ಶಿವಪ್ಪ ಸಮುದಾಯ ಸಂಘಟನಾಧಿಕಾರಿ ಮೈಸೂರು ಮಹಾನಗರ ಪಾಲಿಕೆ ದೂ.ಸಂ.9886715356 ಅವರನ್ನು ಸಂಪರ್ಕಿಸಲು ಕೋರಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: