ಮೈಸೂರು

ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವುದೇ ಆತಂಕವಿಲ್ಲದೆ ಮುಕ್ತಾಯ ; ಕೊನೆಯ ಪರೀಕ್ಷೆಗೆ 356ಮಂದಿ ಗೈರು : ಡಾ.ಪಾಂಡುರಂಗ ಮಾಹಿತಿ

ಮೈಸೂರು,ಜು.3:- ಮೈಸೂರು ಜಿಲ್ಲೆಯಲ್ಲಿ ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಯಾವುದೇ ಆತಂಕವಿಲ್ಲದೆ ಮುಕ್ತಾಯಗೊಂಡಿದೆ. ಜಿಲ್ಲೆಯಲ್ಲಿನ ಒಟ್ಟು 139 ಕೇಂದ್ರಗಳಲ್ಲಿ ಪರೀಕ್ಷೆಗೆ ಒಟ್ಟು 38031 ವಿದ್ಯಾರ್ಥಿಗಳು ನೋಂದಾಯಿಸಿದ್ದು, 37675ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 356ಮಂದಿ ಗೈರು ಹಾಜರಾಗಿದ್ದಾರೆಂದು ಉಪನಿರ್ದೇಶಕರಾದ ಡಾ.ಪಾಂಡುರಂಗ ತಿಳಿಸಿದರು.

ಕಂಟೈನ್ ಮೆಂಟ್ ಝೋನ್ ನಿಂದ ಬಂದು ಪರೀಕ್ಷೆ ಬರೆದವರು 81ಮಂದಿ, ಜ್ವರ ಕೆಮ್ಮು ಕಾರಣಗಳಿಂದ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆದವರು 34, ಪರೀಕ್ಷೆಗೆ ಹಾಜರಾದ ಒಟ್ಟು ಖಾಸಗಿ ಅಭ್ಯರ್ಥಿಗಳು 577, ವಸತಿ ನಿಲಯಗಳಿಂದ ಬಂದು ಪರೀಕ್ಷೆ ಬರೆದವರು 460, ಹೊರ ಜಿಲ್ಲೆಗಳಿಂದ ಬಂದು ಪರೀಕ್ಷೆ ಬರೆದವರು 339, ಮಕ್ಕಳನ್ನು ಪರೀಕ್ಷೆಗೆ ಕರೆತರಲು ಕರಾರು ಒಪ್ಪಂದದ ಮೇಲೆ ಪಡೆಯಲಾದ ಒಟ್ಟು ಕೆಎಸ್ ಆರ್ ಟಿಸಿ ಬಸ್ ಗಳು 60. ಜಿಲ್ಲೆಯಲ್ಲಿ ಯಾವುದೇ ಪರೀಕ್ಷಾ ಅಕ್ರಮಗಳು ನಡೆದಿಲ್ಲ. ಜಿಲ್ಲೆಯ 139 ಕೇಂದ್ರಗಳಲ್ಲಿಯೂ ಯಾವುದೇ ಗೊಂದಲ/ ಸಮಸ್ಯೆಗಳಿಲ್ಲದೆ 6ದಿನಗಳಲ್ಲಿಯೂ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ. ಈ ಪರೀಕ್ಷೆ ಯಶಸ್ವಿಯಾಗಲು ಸಲಹೆ/ಮಾರ್ಗದರ್ಶನ ನೀಡಿದ ಶಿಕ್ಷಣ ಸಚಿವರು, ಇಲಾಖೆಯ ಹಿರಿಯ ಅಧಿಕಾಕಾರಿಗಳು, ಮೈಸೂರು ಜಿಲ್ಲೆಯ ಅಧಿಕಾರಿಗಳು, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ಈ ಪರೀಕ್ಷೆಗೆ  ಸಹಕರಿಸಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಕೆಎಸ್ ಆರ್ ಟಿಸಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಗ್ರಾಮಿಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖಾಧಿಕಾರಿಗಳು ಮತ್ತು ಸಿಬ್ಬಂದಿಗಳು ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿಗಳಿಗೆ ಪೋಷಕರು ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಪರವಾಗಿ ವಂದನೆಗಳನ್ನು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: