ಮೈಸೂರು

ಮೊದಲ ದಿನದ ಕರ್ಫ್ಯೂ ಆರಂಭಕ್ಕೂ ಮುನ್ನವೇ ಮಳಿಗೆಗಳನ್ನು ಮುಚ್ಚಿ ತೆರಳಿದ ವರ್ತಕರು : ಹಲವು ಕಡೆ ಪೊಲೀಸ್ ರಿಂದ ಜಾಗೃತಿ

ಮೈಸೂರು,ಜು.3:- ಕೊರೋನಾ ವೈರಸ್ ಸೋಂಕು ಹರಡುತ್ತಿದ್ದು ಅದನ್ನು ತಡೆಯಲು ಇಂದಿನಿಂದ ಮೈಸೂರು ನಗರದಲ್ಲಿ ಸಂಜೆ 6ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ಕರ್ಫ್ಯೂ ವಿಧಿಸಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ಕರ್ಫ್ಯೂ ಹಿನ್ನೆಲೆಯಲ್ಲಿ ನಗರದ ಪ್ರಮುಖ ಮಾರುಕಟ್ಟೆ ಸ್ಥಳಗಳಲ್ಲಿ, ಹಾಗೂ ಪ್ರಮುಖ ಬೀದಿಗಳಲ್ಲಿ ಸಂಚಾರಿ ಪೊಲೀಸ್ ರು ಜನರಲ್ಲಿ 5ಗಂಟೆಗೂ   ಮೊದಲೇ ಮನೆ ಸೇರಿಕೊಳ್ಳುವಂತೆ ಜಾಗೃತಿ ಮೂಡಿಸಿದರು. ಇದೇ ವೇಳೆ ವರ್ತಕರಲ್ಲಿಯೂ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮನೆಗೆ ತೆರಳುವಂತೆ ಸೂಚನೆ ನೀಡಿದರು. ಕೊರೋನಾ ಹರಡುವುದನ್ನು ತಡೆಯಲು ಸಂಜೆ 6ಗಂಟೆಯಿಂದ ಬೆಳಿಗ್ಗೆ 5ಗಂಟೆಯವರೆಗೆ ಕರ್ಫ್ಯೂ ವಿಧಿಸಲಾಗಿದ್ದು ಜನತೆ ಸಹಕರಿಸಿ ಎಂದು ಮನವಿ ಮಾಡಿದರು.

ನಗರದ ಹಲವೆಡೆಗಳಲ್ಲಿ ಸಾಯಂಕಾಲ 5ಗಂಟೆಯಾಗುತ್ತಲೇ ವರ್ತಕರು ತಮ್ಮ ತಮ್ಮ  ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತೆರಳಿರುವುದು ಕಂಡು ಬಂತು. ಇನ್ನು ಬೀದಿ ವ್ಯಾಪಾರಸ್ಥರು ಕೂಡ ರಸ್ತೆಯಲ್ಲಿ ಯಾರೂ ಕಂಡು ಬರದೆ ಎಲ್ಲರೂ ಅವಧಿಗೂ ಮೊದಲೇ ತೆರಳಿರುವುದು ಕಂಡು ಬಂತು. ವಿಚಾರ ತಿಳಿಯದ ಬೆರಳೆಣಿಕೆಯ ವಾಜನಗಳು ಸಂಚರಿಸಿದ್ದು ಬಿಟ್ಟರೆ ಮತ್ತೆಲ್ಲೂ ವಾಹನಗಳು ಅಷ್ಟಾಗಿ ರೋಡಿಗಿಳಿದಿರಲಿಲ್ಲ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: