ಪ್ರಮುಖ ಸುದ್ದಿ

ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಡಿಕೆ ಶಿವಕುಮಾರ್ ಪದಗ್ರಹಣ ವೀಕ್ಷಣೆ

ರಾಜ್ಯ( ಮಡಿಕೇರಿ) ಜು. 3 :- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದ ವೀಕ್ಷಣೆಯನ್ನು ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಜನಾಬ್ ಸೈಯೆದ್ ಅಹ್ಮದ್ ಅವರ ನಿರ್ದೇಶನ ಮೇರೆಗೆ ದುಃಹ್ ನೊಂದಿಗೆ ಆರಂಭಿಸಲಾಯಿತು.
ನಗರದ ಹಿಲ್ ರೋಡ್‍ನ ಭಾಷಾ ಅವರ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮಡಿಕೇರಿ ಬ್ಲಾಕ್ ಕಾಂಗ್ರೆಸ್‍ನ ವೀಕ್ಷಕ ಹಾಗೂ ಕೆಪಿಸಿಸಿ ಸಂಯೋಜಕ ವೆಂಕಪ್ಪ ಗೌಡರು ಮತ್ತು ಕಾಂಗ್ರೆಸ್ ಮುಖಂಡ ಚಂದ್ರಮೌಳಿ, ಡಿಸಿಸಿ ಅಧ್ಯಕ್ಷ ಮಂಜುನಾಥ್ ಭೇಟಿ ನೀಡಿ ಶುಭ ಹಾರೈಸಿದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎಂ. ಎ. ಉಸ್ಮಾನ್, ಜಿಲ್ಲಾ ಕಾರ್ಯದರ್ಶಿ ಕೆ. ಎಂ. ಸೈಯೆದ್ ಭಾವ, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಲೀಲ್ ಭಾಷಾ, ಎನ್‍ಎಸ್‍ಯುಐ ಉಪಾಧ್ಯಕ್ಷರಾದ ಹ್ಯಾರಿಸ್ ಉಸ್ಮಾನ್, ಮುನೀರ್ ಮಚಾರ್, ಮುಸ್ತಾಫಾ ಮಡಿಕೇರಿ, ನೌಷಾದ್ ಮೀಡಿಯಾ ಸೊಂಟಿಕೊಪ್ಪ, ಮತ್ತು ಕೊಡಗು ಕಾಂಗ್ರೆಸ್ ಜಿಲ್ಲಾ ಸಮಿಯ ಅಲ್ಪಸಂಖ್ಯಾತ ಘಟಕದ ಸದಸ್ಯರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: