ಪ್ರಮುಖ ಸುದ್ದಿ

ಸೋಂಕು ನಿವಾರಕ ಸಿಂಪಡಣೆ : ಜು.4 ರಂದು ಕೋವಿಡ್ ಪ್ರಯೋಗಾಲಯ ಬಂದ್

ರಾಜ್ಯ( ಮಡಿಕೇರಿ) ಜು.3 ; ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೈಕ್ರೋ ಬಯೋಲಜಿ ವಿಭಾಗದಲ್ಲಿ ಕೋವಿಡ್ ಪರೀಕ್ಷೆ ಪ್ರಯೋಗಾಲಯಕ್ಕೆ ಸೋಂಕು ನಿವಾರಕವನ್ನು ಸಿಂಪಡಿಸಲಾಗುತ್ತಿರುವುದರಿಂದ ಪ್ರಯೋಗಾಲಯವನ್ನು ಜು.3 ಮತ್ತು ಜು.4 ರಂದು ಮುಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈ ದಿನ ಬೆಳಗ್ಗೆ ಈಗಾಗಲೇ ವರದಿಯಾಗಿ, ಪ್ರಕಟಿಸಿರುವ ಪ್ರಕರಣಗಳಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಈ ಹಿಂದೆ ಮಡಿಕೇರಿ ನಗರದಲ್ಲಿ ಕೋವಿಡ್ ಸೋಂಕು ದೃಢಪಟ್ಟ ನಾಲ್ಕು ಜನ ವೈದ್ಯರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿರುವುದು ದೃಢಪಟ್ಟಿರುತ್ತದೆ. ಈ ಇಬ್ಬರು ಆರೋಗ್ಯ ಕಾರ್ಯಕರ್ತರು ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಅಧೀನದ ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಆದ್ದರಿಂದ ಸದರಿ ಪ್ರಯೋಗಾಲಯಕ್ಕೆ ಸೋಂಕು ನಿವಾರಕವನ್ನು ಸಿಂಪಡಿಸುವ ಉದ್ದೇಶದಿಂದ ಜು.3 ಮತ್ತು ಜು.4 ರಂದು ಪ್ರಯೋಗಾಲಯವನ್ನು ಮುಚ್ಚಲಾಗಿದೆ. ಜು.5 ರಿಂದ ಪ್ರಯೋಗಾಲಯವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: