ಮೈಸೂರು

ದನದ ಕೊಟ್ಟಿಗೆಗೆ ಬೆಂಕಿ : ಹಸುಗಳು ಸಜೀವ ದಹನ

ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮೂರು ಹಸುಗಳು ಸಜೀವ ದಹನಗೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನಡೆದಿದೆ.

ಬಸವರಾಜಪುರ ಗ್ರಾಮದ ಬಸವದೇವರು ಎಂಬವರಿಗೆ ಸೇರಿದ ಹಸುಗಳು ಸಜೀವದಹನಗೊಂಡಿವೆ. ಭಾನುವಾರ ರಾತ್ರಿ ಕೊಟ್ಟಿಗೆಗೆ ಬೆಂಕಿ ತಗುಲಿದ್ದು, ಹಸುಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿವೆ. ಕೊಟ್ಟಿಗೆಯ ಪಕ್ಕದಲ್ಲಿದ್ದ ಒಣಹುಲ್ಲಿಗೂ ಬೆಂಕಿ ತಗುಲಿದ್ದರಿಂದ ತಕ್ಷಣವೇ ಬೆಂಕಿ ಆವರಿಸಿಕೊಂಡಿದೆ ಎಂದು ಹೇಳಲಾಗಿದೆ. ಬೇಸಿಗೆ ಮತ್ತು ಬರದಿಂದಾಗಿ ಮೇವಿಗೆ ಅಭಾವ ಇರುವುದರಿಂದ ಕೊಟ್ಟಿಗೆಯಲ್ಲೇ ಮೇವನ್ನು ದಾಸ್ತಾನು ಮಾಡಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಹಸುಗಳನ್ನು ಬೆಂಕಿಗಾಹುತಿಯಾಗಿವೆ.

ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: