ಮೈಸೂರು

ಎರಡು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದ ಲಾರಿ : ಯುವಕ ಸಾವು

ಮೈಸೂರು,ಜು.4:- ಲಾರಿಯೊಂದು  ಎರಡು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮಾನಂದವಾಡಿ ರಸ್ತೆಯಲ್ಲಿ ನಡೆದಿದೆ.

ಮೃತರನ್ನು ಹೆಚ್.ಡಿ.ಕೋಟೆ ತಾಲೂಕಿನ ಕಾರೆಹುಂಡಿ ಗ್ರಾಮದ ಸಂಜಯ್(24) ಎಂದು ಗುರುತಿಸಲಾಗಿದೆ. ಸಂಜಯ್ ತನ್ನ ಸ್ನೇಹಿತನೊಂದಿಗೆ ಮೈಸೂರು ಕಡೆಯಿಂದ ಹೆಚ್.ಡಿ.ಕೋಟೆ ಕಡೆಗೆ ತೆರಳುತ್ತಿರುವಾಗ ಎದುರಿನಿಂದ ಬಂದ ಕೇರಳ ನೋಂದಾಯಿತ ಲಾರಿಯೊಂದು ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಸಂಜಯ್ ಮೃತಪಟ್ಟಿದ್ದಾರೆ. ಇದೇ ಲಾರಿ ಮೈಸೂರು ಕಡೆಯಿಂದ ಹೋಗುತ್ತಿದ್ದ ಮತ್ತೊಂದು ಬೈಕಿಗೂ ಡಿಕ್ಕಿ ಹೊಡೆದಿದೆ. ಮೃತರ ಬೈಕ್ ನ ಹಿಂಬದಿ ಸವಾರ ಮತ್ತು ಮತ್ತೊಂದು ಬೈಕ್ ನ ಸವಾರ ಗಾಯಗೊಂಡಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: