ಮೈಸೂರು

ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ವ್ಯಕ್ತಿ ಸಾವು: ಇನ್ನೋರ್ವನಿಗೆ ಗಾಯ

ನಿರ್ಮಾಣದ ಹಂತದಲ್ಲಿರುವ  ಮನೆಯೊಂದರ ಕಬ್ಬಿಣ ಕೆಲಸಕ್ಕೆ ಹೋದ ಇಬ್ಬರು ವ್ಯಕ್ತಿಗಳು ಅಧಿಕ ವಿದ್ಯುತ್ ಪ್ರವಹಿಸುವ ತಂತಿ ತಗುಲಿ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಾಯಗೊಂಡ ಘಟನೆ ಮೈಸೂರಿನ ಹಿನಕಲ್ ನಲ್ಲಿನ ಅಂಬೇಡ್ಕರ್ ಬೀದಿಯಲ್ಲಿ ನಡೆದಿದೆ.

ಹಿನಕಲ್ ನಿವಾಸಿ ನವೀನ್  ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ, ಇನ್ನೋರ್ವ ಚಂದ್ರುವಿನ ಎಡಗೈ ಗೆ ಸುಟ್ಟ ಗಾಯಗಳಾಗಿವೆ. ಇವರಿಬ್ಬರು ಅಂಬೇಡ್ಕರ್ ಬೀದಿಯ ಚಿನ್ಮಯ್ ಎಂಬವರ ಮನೆಗೆ ಕಬ್ಬಿಣದ ಕೆಲಸ ಮಾಡಲು ತೆರಳಿದ್ದರು. ಈ ವೇಳೆ ಕಬ್ಬಿಣ ಹಿಡಿದು ಕೆಲಸ ಮಾಡುತ್ತಿರುವಾಗ ಅಧಿಕ ವಿದ್ಯುತ್ ಪ್ರವಹಿಸುವ ತಂತಿ ಇವರಿಗೆ ತಗುಲಿದೆ. ತಕ್ಷಣ ಅವರು ಜ್ಞಾನತಪ್ಪಿ ಕೆಳಕ್ಕುರುಳಿದ್ದಾರೆ. ಅವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.  ಆದರೆ ನವೀನ್ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: