ಮೈಸೂರು

ಮೈಸೂರಿನ ಕೇಂದ್ರ ಕಾರಾಗೃಹಕ್ಕೂ ವಕ್ಕರಿಸಿದ ಮಹಾಮಾರಿ ಕೊರೋನಾ : ಓರ್ವ ಖೈದಿಗೆ ಸೋಂಕು

ಮೈಸೂರು,ಜು.4:- ಸಾಂಸ್ಕೃತಿಕ ನಗರಿ ಮೈಸೂರಿನೆಲ್ಲೆಡೆ ಕೋವಿಡ್ -19 ಹೆಚ್ಚುತ್ತಲೇ ಇದ್ದು ಈ ಮಧ್ಯೆ ಕೇಂದ್ರ ಕಾರಾಗೃಹಕ್ಕೂ ಮಹಾಮಾರಿ ವಕ್ಕರಿಸಿದೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಖೈದಿಗೆ ಕೊರೋನಾ ಸೋಂಕು ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.  ವಿಚಾರಣಾಧೀನ ಖೈದಿ ಮೈಸೂರಿನ ವಿಜಯನಗರ ಕೊಲೆ ಪ್ರಕರಣದ ಆರೋಪಿಯಾಗಿದ್ದು ಜೈಲು ಸೇರಿದ್ದಾನೆ. ಈತ ಕೊಲೆ‌ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ  ನಂತರ  ವಿಜಯನಗರ ಪೊಲೀಸರಿಗೆ ಆರೋಪಿ ಶರಣಾಗಿದ್ದ.

ಬಳಿಕ ಆತನನ್ನು ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದಾದ ನಂತರ ಮೂರು ದಿನಗಳ ಹಿಂದೆ ಆರೋಪಿಗೆ ಪರೀಕ್ಷೆಗೆ ಒಳಪಡಿಸಲಾಗಿತ್ತು.ಪರೀಕ್ಷೆಯಲ್ಲಿ  ಆರೋಪಿಗೆ ಕೊರೊನಾ ಇರುವುದು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಆತನ ಜೊತೆಗಿದ್ದ 20 ಖೈದಿಗಳನ್ನು ಜೈಲಿನಲ್ಲೇ ಕ್ವಾರಂಟೈನ್ ಮಾಡಲಾಗಿದೆ ಎನ್ನಲಾಗಿದೆ.

ಐಜಿಪಿ ಮನೆಯ ಅಡುಗೆ ಭಟ್ಟನಲ್ಲಿಯೂ ಕೊರೋನಾ

ಏತನ್ಮಧ್ಯೆ ದಕ್ಷಿಣ ವಲಯ ಐಜಿಪಿ ಮನೆಯ ಅಡುಗೆ ಭಟ್ಟನಲ್ಲಿಯೂ ಕೊರೋನಾ ಸೋಂಕು ಧೃಢಪಟ್ಟಿದೆ.

ಅಡುಗೆ ಭಟ್ಟನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಯಾವ ಪ್ರದೇಶವನ್ನು ಸೀಲ್ ಮಾಡಬೇಕೆನ್ನುವ ಗೊಂದಲದಲ್ಲಿ ಜಿಲ್ಲಾಡಳಿತವಿದೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: