ಮೈಸೂರು

ನೀತಿ ಸಂಹಿತೆ ಉಲ್ಲಂಘಿಸಿದ ಶ್ರೀನಿವಾಸ್ ಪ್ರಸಾದ್ : ನೋಟೀಸ್ ಜಾರಿ

ನಂಜನಗೂಡು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಮಾರ್ಚ್ 26ರಂದು ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದ ವೃದ್ಧೆಯೋರ್ವರಿಗೆ ಬಹಿರಂಗವಾಗಿ 100ರೂ. ನೀಡುವ ಮೂಲಕ ಚುನಾವಣಾ ನೀತಿಸಂಹಿತೆಯನ್ನು ಉಲ್ಲಂಘಿಸಿದ ಕಾರಣ 24 ಗಂಟೆಯೊಳಗೆ ಲಿಖಿತ ವಿವರಣೆಯನ್ನು ನೀಡಲು ನೋಟೀಸ್ ಜಾರಿಗೊಳಿಸಲಾಗಿದೆ.

ಚುನಾವಣಾಧಿಕಾರಿ ಜೆ.ಜಗದೀಶ ನೋಟೀಸ್ ಜಾರಿಗೊಳಿಸಿದ್ದು, ಮಾರ್ಚ್ 26ರಂದು 214-ನಂಜನಗೂಡು(ಪ.ಜಾ) ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾಪಕ್ಷದ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್  ದೇವರಸನಹಳ್ಳಿ ಗ್ರಾಮದ ಪುಟ್ಟತಾಯಮ್ಮ ಎಂಬ ವೃದ್ಧೆಗೆ 100ರೂ. ನೀಡುವ ಮೂಲಕ ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಈ ಕುರಿತು 24ಗಂಟೆಯೊಳಗೆ ಲಿಖಿತ ವಿವರಣೆಯನ್ನು ನೀಡಲು ನೋಟೀಸ್ ಜಾರಿಗೊಳಿಸಲಾಗಿದ್ದು, ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: