ಮೈಸೂರು

ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಗೊರೂರು ರಾಮಸ್ವಾಮಿ  ಅಯ್ಯಂಗಾರ್ ಜನ್ಮ ದಿನ ಆಚರಿಸಿದ ಬೇರು ಫೌಂಡೇಷನ್

ಮೈಸೂರು,ಜು.4:-  ಬೇರು ಫೌಂಡೇಷನ್ ವತಿಯಿಂದ ಕನ್ನಡದ ಖ್ಯಾತ ಲೇಖಕರು ಗೊರೂರು ರಾಮಸ್ವಾಮಿ  ಅಯ್ಯಂಗಾರ್ ಅವರ ಜನ್ಮ ದಿನಾಚರಣೆ ಅಂಗವಾಗಿ ಜಯಲಕ್ಷ್ಮಿಪುರಂನಲ್ಲಿರುವ ಥಂಡಿ ಪಾರ್ಕ್ ನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಇಂದು ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಬೇರು ಫೌಂಡೇಶನ್ ಅಧ್ಯಕ್ಷರಾದ ಮಧು ಮಾತನಾಡಿ  ಎನ್ ಪೂಜಾರ್ ಅಪ್ಪಟ ಗಾಂಧಿವಾದಿ ಸಾಹಿತಿ ಗೊರೂರು  ರಾಮಸ್ವಾಮಿ ಅಯ್ಯಂಗಾರ್  ಇವರು ಮಹಾತ್ಮ ಗಾಂಧೀಜಿಯವರ ಚಳವಳಿ ಹೋರಾಟಗಳಿಂದ ಪ್ರಚೋದಿತರಾಗಿ ಗುಜರಾತಿಗೆ ಹೋಗಿ ಗಾಂಧೀಜಿಯವರ ಶಾಲೆಯಲ್ಲಿ ಸೇರ್ಪಡೆಗೊಂಡರು. ಗಾಂಧೀಜಿಯವರ ಒಟ್ಟುಗೂಡಿ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದರು.   ಗುಜರಾತಿನಲ್ಲಿ ಪ್ರಖ್ಯಾತ ಪತ್ರಿಕೆ ವರ್ಗದಲ್ಲಿ ಎರಡು ವರ್ಷಗಳ ಕಾಲ ಕೆಲಸವನ್ನು ನಿರ್ವಹಿಸಿದರು. ಲೇಖಕರಾಗಿ ಸಾಹಿತಿಗಳಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಚಳವಳಿ ಕಾರರಾಗಿ ಭಾರತ ದೇಶಕ್ಕೆ ಹಾಗೂ ಕರ್ನಾಟಕ ರಾಜ್ಯಕ್ಕೆ ಅವರದೇ ಆದ ಕೊಡುಗೆಯನ್ನು ನೀಡಿದರು.

ಗೊರೂರರು ತಮ್ಮ ಬರಹಗಳಲ್ಲಿ ಈಗ ಕಾಣಸಿಗದ ಅಥವಾ ತ್ವರಿತವಾಗಿ ಮರೆಯಾಗುತ್ತಿರುವ ಹಳ್ಳಿಯ ಬದುಕನ್ನು ಅದರ ಎಲ್ಲ ಮುಖಗಳೊಡನೆ ಚಿತ್ರಿಸುವಲ್ಲಿ ಸಫಲರಾಗಿದ್ದಾರೆ. ಗ್ರಾಮೀಣ ಜೀವನದಲ್ಲಿ ಅವರು ಒಂದಾಗಿ ಬಾಳಿದ್ದರಿಂದ ಇದು ಸಾಧ್ಯವಾಗಿದೆ. ಅವರ ಕೃತಿಗಳಲ್ಲಿ ಕಂಡು ಬರುವ ಪಾತ್ರ ವೈವಿಧ್ಯ ಅಪಾರವಾದುದು. ಅಲ್ಲಿ ಗ್ರಾಮದ ಎಲ್ಲ ವೃತ್ತಿಗಳ, ಎಲ್ಲ ಜಾತಿಗಳ ಜನರೂ ಇದ್ದಾರೆ   ಹಾರುವರಿಂದ ಹರಿಜನರ ತನಕ (‘ನಮ್ಮ ಎಮ್ಮೆಗೆ ಮಾತು ತಿಳಿಯುವುದೇ?’ ಎಂಬ ಪ್ರಬಂಧದಲ್ಲಿ ಪ್ರಾಣಿ ಪಾತ್ರವೂ ಉಂಟು.) ಆದರೆ ಜಾತಿ-ಮತ-ಭೇದಗಳನ್ನು ಮೀರಿ ಎಲ್ಲರನ್ನೂ ಒಗ್ಗೂಡಿಸುವ ಕೆಲವು ಸೂತ್ರಗಳನ್ನು ಗೊರೂರರು ಗುರುತಿಸಿ, ಅವುಗಳಿಗೆ ಒತ್ತು ಕೊಡುವುದರ ಮೂಲಕ ಸಾಮರಸ್ಯಯುತವಾದ ಒಂದು ಸಮಷ್ಟಿಯ ಚಿತ್ರವನ್ನು ಮೂಡಿಸಿದ್ದರು ಎಂದರು.

ಈ ಸಂದರ್ಭ  ಚಂದ್ರಕಲಾ, ಗೌತಮ್, ಗುರುರಾಜ್ ,ವಿಜಯ್, ಶಿವಪ್ರಕಾಶ್  ಇನ್ನಿತರರು ಹಾಜರಿದ್ದರು. (ಕೆ.ಎಸ್.ಎಸ್.ಎಚ್)

Leave a Reply

comments

Related Articles

error: