ಮೈಸೂರು

ರಕ್ತದಾನ ಮಾಡುವ ಮೂಲಕ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ರಕ್ತದಾನ ಮಹಾದಾನ ಗೋಭಕ್ತ ಸಂಘದ ಸದಸ್ಯರು

ಮೈಸೂರು,ಜು.5:- ರಕ್ತದಾನ ಮಹಾದಾನ ಗೋಭಕ್ತ ಸಂಘದ ವತಿಯಿಂದ ಸಯ್ಯಾಜಿರಾವ್ ರಸ್ತೆಯಲ್ಲಿ ಇರುವ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ  ಗುರು ಪೂರ್ಣಿಮೆ ಅಂಗವಾಗಿ ಗುರುಗಳಾದ   ಪುರಂದಾಸ್ ಜಿ ಮಹಾರಾಜ್, ಮತ್ತು  ರೋಹಿತ್ ದಾಸ್ ಜೀ ಮಹಾರಾಜ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಆನಂತರ ಗುರುಗಳ ಹೆಸರಿನಲ್ಲಿ 30 ಜನ ಸ್ವಯಂಪ್ರೇರಿತವಾಗಿ  ರಕ್ತದಾನ ಮಾಡುವ ಮೂಲಕ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಗುರುಗಳನ್ನು ಸ್ಮರಿಸಿದರು.

ರಕ್ತದಾನ ಮಹಾದಾನ ಗೋಭಕ್ತ ಸಂಘದ ಅಧ್ಯಕ್ಷರಾದ  ಪ್ರಕಾಶ್ ನಿಖಂ ಮಾತನಾಡಿ ಗುರು ಪರಂಪರೆಗೆ ಹಿಂದಿನಿಂದಲೂ ವಿಶಿಷ್ಟ ಹಾಗೂ ಗೌರವಯುತ ಸ್ಥಾನವಿದೆ. ಗುರುವಿನ ಸ್ಥಾನದಲ್ಲಿರುವವರು ತಮ್ಮಲ್ಲಿರುವ ಜ್ಞಾನವನ್ನು ಇತರರಿಗೆ ಧಾರೆ ಎರೆಯುವ ಮೂಲಕ ಗುರು ಪರಂಪರೆಯನ್ನು ಉಳಿಸಿ ಬೆಳೆಸಬೇಕು ಎಂದರು.  ಗುರು ಪರಂಪರೆ ಯಾವಾಗಲೂ ಪ್ರಬುದ್ಧತೆಯಿಂದ ಕೂಡಿದ್ದಾಗಿದೆ. ಈ ಪರಂಪರೆ ಉನ್ನತ ಮೇಲ್ವರ್ಗ ಹಾಗೂ ಸಿರಿವಂತರಿಗಷ್ಟೇ  ಸೀಮಿತವಾಗಿರುವಂತಾಗಿತ್ತು.  ಇದಕ್ಕಾಗಿ ಬಸವ.  ಬುದ್ಧ.  ಸರ್ವಜ್ಞ. ಸೂಫಿಗಳು.  ದಾಸರು ಜನರ ಮಧ್ಯೆ ಬಂದು ಸಾಮಾನ್ಯ ಜನರಿಗೂ ಜಗತ್ತಿನ ಆಗುಹೋಗುಗಳನ್ನು ಬದುಕಿನ ಜಂಜಾಟಗಳನ್ನು  ಕಾಯಕದ ಮಹತ್ವವನ್ನು , ಸಮಾಜದ ಸಾಮರಸ್ಯ ಕಾಪಾಡಿಕೊಳ್ಳುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ.  ಹಾಗಾಗಿ ನಮ್ಮ ತಂಡದಿಂದ ಪ್ರತಿ ವರ್ಷದಂತೆ ಈ ವರ್ಷವೂ ರಕ್ತದಾನ ಮಾಡುವ ಮೂಲಕ ಗುರುಗಳನ್ನು ಸ್ಮರಿಸುತ್ತಿದ್ದೇವೆ ಎಂದರು.

ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಗಿರೀಶ್  ಮಾತನಾಡಿ ಲಾಕ್ ಡೌನ್ ಸಂಕಷ್ಟದಲ್ಲಿ ರಕ್ತನಿಧಿ ಸಂಖ್ಯೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಮಾನವೀಯತೆ ದೃಷ್ಟಿಯಿಂದ ಯುವಸಮೂಹ ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ  ಜೀವರಕ್ಷಣೆಗೆ  ಆಸರೆಯಾಗುತ್ತಿರುವುದು ಶ್ಲಾಘನೀಯ.  ರಕ್ತದಾನ ಮಾಡಿದರೆ  ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ.  ಉಸಿರಾಟ ಶ್ವಾಸಕೋಶ ಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯವಾಗಿ ಜೀವಿಸಬಹುದು, ಮನೆಗೊಬ್ಬ ರಕ್ತದಾನಿ ಮುಂದಾದರೆ  ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜೀವಧಾರ ರಕ್ತನಿಧಿ ಕೇಂದ್ರ ನಿರ್ದೇಶಕರಾದ   ಗಿರೀಶ್ ,ರಕ್ತದಾನ ಮಹಾದಾನ ಗೋಭಕ್ತ ಸಂಘದ ಪ್ರಕಾಶ್ ನಿಖಂ,ವೈದ್ಯರಾದ ಡಾಕ್ಟರ್ ಮಮತಾ, ಡಾಕ್ಟರ್ ಕಿರಣ್ , ದೇವೇಂದ್ರ, ಪಹರಿಯಾ’ ವಿಕಾಸ್ ರಾಥೋಡ್,ಪ್ರಕಾಶ್ ರಾಥೋಡ್, ದಾನಾರಾಮ್ ಪರಿಹಾರ್, ಗೂಡಾರಾಮ್ ಕಗ್, ಆನಂದ್ ಮಂದೋಟ್, ಚಿರಂಜೀಲಾಲ್ ಕುಮವತ್, ರಮೇಶ್ ಚೋಯಲ್,ರಾಕೇಶ್ ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: