ಮೈಸೂರು

ಹಿರಿಯ ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಸಹೋದರಿ ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ

ಮೈಸೂರು,ಜು.6:- ಹಿರಿಯ ಪತ್ರಿಕೋದ್ಯಮಿ ದಿ. ರಾಜಶೇಖರ ಕೋಟಿ ಅವರ ಕಿರಿಯ ಸಹೋದರಿ ಅನ್ನಪೂರ್ಣ ಕುರುವಿನ  ಕೊಪ್ಪ ಅವರ ನಿಧನಕ್ಕೆ ಸಚಿವ ಎಸ್.ಟಿ.ಸೋಮಶೇಖರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ  ಅನ್ನಪೂರ್ಣ ಕುರುವಿನ  ಕೊಪ್ಪ ಅವರದ್ದು ಅಸಾಧಾರಣ ವ್ಯಕ್ತಿತ್ವ. ಮೊದಲಿನಿಂದಲೂ ಸಾಹಸ ಮನೋಭಾವವನ್ನು ಹೊಂದಿರುವ ಅವರು 12 ಬಾರಿ ಹಿಮಾಲಯಕ್ಕೆ ಚಾರಣ ಹೋಗಿದ್ದಾರೆಂದರೆ ಕಡಿಮೆ ಮಾತಲ್ಲ. ಟ್ರಕಿಂಗ್ ನಲ್ಲಿ ಆಸಕ್ತಿ ಹೊಂದಿರುವ ಇವರು ರಾಜ್ಯಮಟ್ಟದ ಟ್ರಕಿಂಗ್ ನಲ್ಲಿ ನಾಯಕತ್ವ ವಹಿಸಿದ ಪ್ರಥಮ ಮಹಿಳೆ ಎಂಬ ಖ್ಯಾತಿಯನ್ನೂ ಪಡೆದಿದ್ದಾರೆ.

ಇದಲ್ಲದೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. ಇವರ ನಿಧನದ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗಕ್ಕೆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: