ದೇಶ

ಎನ್ ಕೌಂಟರ್ ನಲ್ಲಿ ಮೃತಪಟ್ಟ ಇಬ್ಬರು ಉಗ್ರರಿಗೆ ಕೊರೊನಾ ಪಾಸಿಟಿವ್

ಶ್ರೀನಗರ,ಜು.6-ಭದ್ರತಾಪಡೆಯವರು ನಡೆಸಿದ ಎನ್ ಕೌಂಟರ್ ನಲ್ಲಿ ಮೃತಪಟ್ಟ ಇಬ್ಬರು ಉಗ್ರರಿಗೆ ಕೊರೊನಾ ಪಾಸಿಟಿವ್ ಬಂದಿದೆ.

ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಅರ್ರೆ ಪ್ರದೇಶದಲ್ಲಿ ಭದ್ರತಾಪಡೆಗಳು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಮೃತಪಟ್ಟಿದ್ದರು. ಮೃತ ಉಗ್ರರ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಇವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಶ್ರೀನಗರದ ಸಿಡಿ ಹಾಸ್ಪಿಟಲ್ ನಿಂದ ಪರೀಕ್ಷಾ ವರದಿ ಬಂದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಉತ್ತರ ಕಾಶ್ಮೀರದ ಬಾರಮುಲ್ಲಾ ಸ್ಮಶಾನದಲ್ಲಿ ಕೋವಿಡ್-19 ನಿಯಮ ಪ್ರಕಾರ ಮೃತ ದೇಹಗಳನ್ನು ದಹಿಸಲಾಗುವುದು ಎಂದು ತಿಳಿಸಿದ್ದಾರೆ. ಇಬ್ಬರು ಭಯೋತ್ಪಾದಕರನ್ನು ಆಲಿ ಭಾಯ್ ಅಲಿಯಾಸ್ ಹೈದರ್ ಮತ್ತು ಸ್ಥಳೀಯ ಹಿಲಾಲ್ ಅಹ್ಮದ್ ಮಲಿಕ್ ಎಂದು ಗುರುತಿಸಲಾಗಿದೆ. (ಎಂ.ಎನ್)

Leave a Reply

comments

Related Articles

error: