ವಿದೇಶ

ಎರಡು ವಿಮಾನಗಳ ನಡುವೆ ಡಿಕ್ಕಿ: ಸರೋವರದೊಳಗೆ ಬಿದ್ದ ಅವಶೇಷ

ನ್ಯೂಯಾರ್ಕ್,ಜು.6- ಎರಡು ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿ ವಿಮಾನದ ಅವಶೇಷಗಳು ಸರೋವರದೊಳಗೆ ಬಿದ್ದಿರುವ ಘಟನೆ ಅಮೆರಿಕದ ಇದಾಹೋ ರಾಜ್ಯದಲ್ಲಿ ನಡೆದಿದೆ.

ಘಟನೆಯಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದಾರೆ. ಇದಾಹೋನ ಕೋವರ್​ ದಿ ಅಲೇನ್​ ಸರೋವರದ ಮೇಲೆ ಅಪಘಾತ ಸಂಭವಿಸಿದೆ.

ಸ್ಥಳೀಯ ಪೊಲಿಸರು ಈ ವಿಷಯವನ್ನು ಖಚಿತಪಡಿಸಿದ್ದಾರೆ. ಎರಡು ವಿಮಾನಗಳ ಪೈಕಿ ಒಂದು ವಿಮಾನದ ಗುರುತು ಪತ್ತೆಯಾಗಿದ್ದು, ಅದು ಸೆಸ್ನಾದಲ್ಲಿ ತಯಾರಾಗಿದ್ದು ಎನ್ನಲಾಗಿದೆ. ಇನ್ನೊಂದು ವಿಮಾನದ ಗುರುತು ಪತ್ತೆ ಮಾಡಬೇಕಿದೆ.

ಅಪಘಾತಕ್ಕೆ ಕಾರಣ ಏನೆಂಬುದು ತಕ್ಷಣವೇ ಗೊತ್ತಾಗಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ಇಬ್ಬರು ಶವಗಳನ್ನು ಮೇಲಕ್ಕೆ ತೆಗೆಯಲಾಗಿದೆ. ಇನ್ನೂ ಆರು ಮಂದಿಯ ಶವಕ್ಕಾಗಿ ಹುಡುಕಾಟ ನಡೆದಿದೆ. ಆದರೆ ಎರಡೂ ವಿಮಾನದಲ್ಲಿ ಹೆಚ್ಚಿನ ಪ್ರಯಾಣಿಕರು ಇದ್ದರು ಎನ್ನಲಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. (ಎಂ.ಎನ್)

Leave a Reply

comments

Related Articles

error: