ಮೈಸೂರು

ಮೈಸೂರು ವಿವಿಗೂ ತಟ್ಟಿದ ಕೊರೋನಾ ವೈರಸ್ ಬಿಸಿ : ಪರೀಕ್ಷಾಂಗ ವಿಭಾಗದ ಸಿಬ್ಬಂದಿಗೆ ಸೋಂಕು; ಹತ್ತು ದಿನಗಳ ಕಾಲ ಕ್ರಾಫರ್ಡ್ ಹಾಲ್ ಬಂದ್

ಮೈಸೂರು,ಜು.6:-  ಕೊರೋನಾ ವೈರಸ್ ಬಿಸಿ ಮೈಸೂರು ವಿವಿಗೂ ತಟ್ಟಿದೆ. ವಿವಿ ಆವರಣದ ಪರೀಕ್ಷಾಂಗ ವಿಭಾಗದಲ್ಲಿ ಸಿಬ್ಬಂದಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫರ್ಡ್ ಹಾಲ್ ಇಂದಿನಿಂದ ಹತ್ತು ದಿನಗಳ ಕಾಲ ಬಂದ್ ಆಗಲಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್‌ಕುಮಾರ್‌ ತಿಳಿಸಿದ್ದಾರೆ.

ಕಳೆದ ಶನಿವಾರ ವಿವಿ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಜತೆಗೆ ಮೈಸೂರಿನಲ್ಲಿ ಸೋಂಕಿನ ಪ್ರಮಾಣ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ  ವಿವಿ ಕಚೇರಿ ಆವರಣವನ್ನು ಹತ್ತು ದಿನಗಳ ಕಾಲ ಮುಚ್ಚಲು ತೀರ್ಮಾನಿಸಲಾಯಿತು ಎಂದಿದ್ದಾರೆ.

ಉಳಿದಂತೆ ವಿವಿಯ ಕಾರ್ಯ ಕಲಾಪಗಳಿಗೆ ಯಾವುದೇ ತೊಂದರೆ ಉಂಟಾಗದಂತೆ ವಿವಿಯ ಇತರೆ ವಿಭಾಗಗಳಲ್ಲೇ ಕೆಲಸ ನಿರ್ವಹಿಸಲು ಸೂಚಿಸುವ ಮೂಲಕ ವಿಕೇಂದ್ರೀಕರಣ ಮಾಡಲಾಗಿದೆ. ಜತೆಗೆ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಹಾಜರಾಗುವ ಬದಲು ಶೇ.50 ರಷ್ಟು ಸಿಬ್ಬಂದಿ ಸಹಕಾರದಲ್ಲಿ ತುರ್ತು ಅಗತ್ಯ ಕೆಲಸ ಕಾರ್ಯ ನಿರ್ವಹಿಸಲಾಗುತ್ತದೆ. ನಾನು ವಿಜ್ಞಾನ ಭವನದಲ್ಲಿ ಹಾಗೂ ನನ್ನ ವಸತಿಗೃಹದಲ್ಲಿ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಹೇಳಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: