ಮೈಸೂರು

ಬಿಜೆಪಿ ಜನಸಂವಾದ ರ್ಯಾಲಿಯ ಸಮಾರೋಪದ ಕಾರ್ಯಕ್ರಮದ ನೇರ ಭಾಷಣ ವೀಕ್ಷಣೆ

ಮೈಸೂರು,ಜು.6:-  ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದ್ದ ಜನಸಂವಾದ ರ್ಯಾಲಿಯ ಸಮಾರೋಪದ ಕಾರ್ಯಕ್ರಮದ ನೇರ ಭಾಷಣವನ್ನು ದೊಡ್ಡ ಪರದೆ ಮೂಲಕ ಚಾಮುಂಡೇಶ್ವರಿ ನಗರ ಮಂಡಲದಿಂದ ವತಿಯಿಂದ ಇಂದು ಪ್ರಸಾರ ಮಾಡಲಾಯಿತು.

ಟಿವಿ ಹಾಗೂ ಮೊಬೈಲ್ ಇಲ್ಲದ ಸ್ಥಳೀಯ ಸ್ಲಂ ನಿವಾಸಿಗಳ ಸಲುವಾಗಿ ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ 45ರ ಶಾರದಾದೇವಿನಗರದ ಇಂದಿರಾ ಶಾಲೆಯ ಆವರಣದಲ್ಲಿ   ವ್ಯವಸ್ಥೆ ಮಾಡಲಾಗಿತ್ತು.

ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾದ ಬಿ.ಎಲ್.ಸಂತೋಷ್ ಅವರು ಜನರನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಭಾಗವಹಿಸಿದ್ದರು. ದೊಡ್ಡ ಪರದೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ತಿಳಿದು ಸ್ಲಂ ನಿವಾಸಿಗಳು ಸಂತೋಷ ವ್ಯಕ್ತಪಡಿಸಿದರು.

ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ಬಿ.ಎಂ.ರಘು, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ರಾಜಮಣಿ, ಈರೇಗೌಡ, ಉಪಾಧ್ಯಕ್ಷರಾದ ವಿಜಯ ಮಂಜುನಾಥ್, ರಾಕೇಶ್ ಭಟ್, ಗಿರೀಶ್ ದಟ್ಟಗಳ್ಳಿ, ಮಹೇಂದ್ರಗೌಡ, ಪ್ರತಾಪ್ ದಟ್ಟಗಳ್ಳಿ, ಕಾರ್ಯಾಲಯ ಕಾರ್ಯದರ್ಶಿ ಶಶಿಕಾಂತ್, ಕಾರ್ಯದರ್ಶಿ ರಮಾಬಾಯಿ, ನಾಗರಾಜ ಜನ್ನು, ಮುಖಂಡರಾದ ರವಿಕುಮಾರ್, ರೈತ ಮೋರ್ಚಾದ ನಗರ ಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಗೌಡ, ಅಲ್ಪಸಂಖ್ಯಾತ ಮೋರ್ಚಾದ ಸ್ಟೀಫನ್ ಸುಜಿತ್, ಮಹಿಳಾ ಮೋರ್ಚಾದ ಶುಭಾಶ್ರೀ, ಗೀತಾ ಮಹೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಚಪ್ಪಾಜಿ, ಅನಿಲ್, ಯುವ ಮೋರ್ಚಾ ನಗರ ಕಾರ್ಯದರ್ಶಿ ಕೆ.ಜೆ.ಮಧು, ಮಂಡಲದ ಹೇಮಂತ್, ಪುನಿತ್, ಸಾಗರ್ ಸಿಂಗ್ ರಜಪೂತ್, ಅನುಪ್, ರಾಘವೇಂದ್ರ ಅಭಿಷೇಕ್, ಶಿವಶಂಜರ್ ಜನ್ನು, ಸೇರಿದಂತೆ ಪ್ರಮುಖ ಮುಖಂಡರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: