ಮೈಸೂರು

ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿಶೇಷ ವೀಕ್ಷಕರ ಸೂಚನೆ

ನಂಜನಗೂಡು ಉಪ ಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ವಿಶೇಷ ವೀಕ್ಷಕರಾಗಿ ನೇಮಿಸಿರುವ ಹಿರಿಯ ..ಎಸ್. ಅಧಿಕಾರಿ ಡಾ. ಕರುಣಾ ರಾಜು ಅವರು  ಸೋಮವಾರ ನಂಜನಗೂಡಿನಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ತಿಳಿಸಿದರು

ಭಾರತ ಚುನಾವಣಾ ಆಯೋಗ ನಿಯೋಜಿಸಿರುವ ಸಾಮಾನ್ಯ ವೀಕ್ಷಕರು, ಪೊಲೀಸ್ ವೀಕ್ಷಕರು ಹಾಗೂ ವೆಚ್ಚ ವೀಕ್ಷಕರು ಕ್ಷೇತ್ರದಲ್ಲಿ ಪ್ರತಿ ವಿಷಯಗಳನ್ನು ಗಮನಿಸುತ್ತಿದ್ದು, ಚುನಾವಣಾ ಅಕ್ರಮಗಳು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಯಾವುದೇ ಮೂಲಗಳಿಂದ ಮಾಹಿತಿ ಬಂದರೂ ತಕ್ಷಣವೇ ಗಮನ ಹರಿಸಿ, ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಸಬೇಕೆಂಬುದು ಭಾರತ ಚುನಾವಣಾ ಆಯೋಗದ ಆಶಯವಾಗಿದೆ. ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು

ಸಭೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಿ.ರಂದೀಪ್ , .ಜಿ.ಪಿ. ವಿಪುಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಚುನಾವಣಾ ಸಾಮಾನ್ಯ ವೀಕ್ಷಕ ಪಂಕಜ್, ಪೊಲೀಸ್ ವೀಕ್ಷಕ ಘನಶ್ಯಾಂ ಬನ್ಸಾಲ್, ವೆಚ್ಚ ವೀಕ್ಷಕ ಅಮರ್ಜ್ಯೋತಿ ಮಜುಂದಾರ್, ಚುನಾವಣಾಧಿಕಾರಿ ಜಿ. ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: