ಮೈಸೂರು

ಮಾ. 29 : ಇಡ್ಲಿ ಮೇಳ

ಎಂಟುಎಂ ಫುಡ್ಸ್ ವತಿಯಿಂದ ಯುಗಾದಿ ಪ್ರಯುಕ್ತ  ಇಡ್ಲಿ  ಮೇಳವನ್ನು ಮಾ.29 ರಂದು ಹೆಬ್ಬಾಳ್‍ನ 16, 7ಎ ಮುಖ್ಯ ರಸ್ತೆ ಸಿಐಟಿಬಿ ಛತ್ರ ಔಟಲೆಟ್‍ನಲ್ಲಿ ಆಯೋಜಿಸಲಾಗಿದೆ ಎಂದು ತಮೀಮ್ ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 20  ವಿವಿಧ ರೀತಿಯ ಇಡ್ಲಿಗಳು ಮೇಳದಲ್ಲಿ ಇರಲಿದ್ದು,  ಇಡ್ಲಿ ಸೇವಿಸುವ ಸ್ಪರ್ಧೆ ಮತ್ತು ಸೆಲ್ಫಿ ವಿತ್ ಇಡ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ಪರ್ಧೆಯಲ್ಲಿ  ಮೂರು ನಿಮಿಷದಲ್ಲಿ ಅತಿ ಹೆಚ್ಚು  ಇಡ್ಲಿ ಸೇವಿಸುವವರಿಗೆ 30 ದಿನಗಳವರೆಗೆ ಬೆಳಗಿನ ಉಪಹಾರ ಮತ್ತು ರಾತ್ರಿಯ ಊಟ ಉಚಿತವಾಗಿ ನೀಡಲಾಗುತ್ತದೆ ಎಂದರು.

50 ರೂ. ಪ್ರವೇಶ ಶುಲ್ಕವಿದ್ದು, ಆಸಕ್ತರು ದೂ. 7829016844 ಅಥವಾ ವಾಟ್ಸ್‍ಆ್ಯಪ್ ನಂ.8870752030 ಇಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಅರ್ಜುನ್, ಮುಸಾಫರ್ ಕನಿ ಹಾಜರಿದ್ದರು. (ಎಲ್.ಜಿ-ಎಸ್.ಎಚ್)

 

 

Leave a Reply

comments

Related Articles

error: