ಮೈಸೂರು

ಕೋವಿಡ್ ಹೆಚ್ಚಳ ಹಿನ್ನೆಲೆ : ಸಾರ್ವಜನಿಕರ ಹಿತದೃಷ್ಟಿಯಿಂದ ಮುಚ್ಚಿದ ಉದ್ಯಾನವನ

ಮೈಸೂರು,ಜು.8:- ಮೈಸೂರಿನಲ್ಲಿ ಕೋವಿಡ್-19 ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ಸಾಮುದಾಯಿಕವಾಗಿ ಹರಡದಂತೆ ತಡೆಯಲು ಹಾಗೂ ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಂದ ಉದ್ಯಾನವನಗಳನ್ನು ಮುಚ್ಚಲಾಗಿದೆ.

ಆದೇಶ ನಿನ್ನೆ ಸಂಜೆ ಹೊರಬಿದ್ದ ಕಾರಣ ಮಾಹಿತಿ ಇಲ್ಲದ ಕೆಲವು ವಾಯು ವಿಹಾರಿಗಳು ಇಂದು ಬೆಳಿಗ್ಗೆ ಕುಕ್ಕರಹಳ್ಳಿ ಕೆರೆಯ ಬಳಿ ಆಗಮಿಸಿ ರಸ್ತೆಯಲ್ಲಿಯೇ ವಾಕ್ ಮಾಡಿ ಹೋಗುತ್ತಿರುವುದು ಕಂಡು ಬಂತು. ಮೈಸೂರು ನಗರದಲ್ಲಿ ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದ ನಾಗರಿಕರು ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉದ್ಯಾನವನಗಳು ಮತ್ತು ಆಟದ ಮೈದಾನಗಳಿಗೆ ಸಾರ್ವಜನಿಕರ ಪ್ರವೇಶವನ್ನು ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಗುರುದತ್ ಹೆಗಡೆ ನಿನ್ನೆ ಸಂಜೆ ಆದೇಶ ಹೊರಡಿಸಿದ್ದರು.  ಕುಕ್ಕರಹಳ್ಳಿ ಪಾರ್ಕ್ ಗೇಟ್ ಮುಚ್ಚಲಾಗಿದ್ದು, ನೋಟೀಸ್ ಅಳವಡಿಸಲಾಗಿದೆ. ನಗರದ ಬಹುತೇಕ ಎಲ್ಲ ಉದ್ಯಾನವನಗಳ ಗೇಟ್ ಗಳು ಮುಚ್ಚಲ್ಪಟ್ಟಿದ್ದು, ಕೆಲವೆಡೆ ಮಾತ್ರ ತಮ್ಮ ಮನೆಯ ಎದುರೇ ಪಾರ್ಕ್ ಇದೆ. ಇಲ್ಲಿಯೇ ಅಡ್ಡಾಡಿದರೆ ತಪ್ಪೇನಿದೆ ಎನ್ನುತ್ತ ಪಾರ್ಕ್ ನಲ್ಲಿ ತಿರುಗಾಡುತ್ತಿರುವುದೂ ಕಂಡು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: