ಮೈಸೂರು

2269.27 ಅಡಿ ತಲುಪಿದ ಕಬಿನಿ ಜಲಾಶಯದ ನೀರಿನ ಮಟ್ಟ

ಮೈಸೂರು,ಜು.9:- ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯದ ನೀರಿನ ಮಟ್ಟ 2269.27 ಅಡಿಗೆ ತಲುಪಿದೆ.

ಕಬಿನಿ ಜಲಾಶಯದ  ಇಂದಿನ ಒಳಹರಿವು 9,204 ಕ್ಯೂಸೆಕ್  ಹಾಗೂ  ಹೊರಹರಿವು 1500 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ ಇದ್ದು, ಇಂದಿನ ನೀರಿನ ಮಟ್ಟ 2269.27 ಅಡಿಗೆ ತಲುಪಿದೆ.   ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಪ್ರಸ್ತುತ ಜಲಾಶಯದಲ್ಲಿ 11.32 ಟಿಎಂಸಿ ನೀರು ಸಂಗ್ರಹವಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: