ಮೈಸೂರು

ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೂ ವಕ್ಕರಿಸಿದ ಕೊರೋನಾ : ಆತಂಕದಲ್ಲಿ ಅಧಿಕಾರಿಗಳು

ಮೈಸೂರು,ಜು.9:- ಮೈಸೂರಿನಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು ಇದೀಗ ಮೈಸೂರಿನಲ್ಲಿರುವ ಕರ್ನಾಟಕ ಪೊಲೀಸ್ ಅಕಾಡೆಮಿಗೂ ವಕ್ಕರಿಸಿದೆ.

ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯಲು ಬಂದ ಓರ್ವ ಡಿವೈಎಸ್ಪಿಗೆ ಕೊರೋನಾ ವೈರಸ್ ಸೋಂಕಿರುವುದು ದೃಢಪಟ್ಟಿದೆ ಎನ್ನಲಾಗಿದೆ. ಮತ್ತೋರ್ವ ಡಿವೈಎಸ್ಪಿ ವರದಿ ಇಂದು ಬರಲಿದೆ ಎನ್ನಲಾಗುತ್ತಿದೆ. ಇದೀಗ ಅವರ ಸಂಪರ್ಕಕ್ಕೆ ಬಂದಿರುವವರು ಆತಂಕ ಪಡುವಂತಾಗಿದೆ. ರಾಜ್ಯ ಸರ್ಕಾರ ತರಬೇತಿಯನ್ನು ಸ್ಥಗಿತಗೊಳಿಸಲು ತಿಳಿಸಿತ್ತು. ಆದರೆ ದಕ್ಷಿಣ ವಲಯ ಐಜಿಪಿ ವಿಫುಲ್ ಕುಮಾರ್, ಅಕಾಡೆಮಿಯ ಪ್ರಭಾರ ನಿರ್ದೇಶಕರೂ ಆಗಿದ್ದು ಸ್ವಂತ ನಿರ್ಧಾರದಿಂದ ತರಬೇತಿ ನಡೆಸುವಂತೆ ಸೂಚಿಸಿದ್ದರು. ಅದರಂತೆ ತರಬೇತಿ ನೀಡಲಾಗುತ್ತಿತ್ತು. ಇದೀಗ ಇಬ್ಬರು ಡಿವೈಎಸ್ಪಿಗಳಲ್ಲಿ ಸೋಂಕು ದೃಢಪಟ್ಟಿದೆ. ಐಜಿಯವರೇ ಖುದ್ದು ಕ್ವಾರೆಂಟೈನ್ ನಲ್ಲಿದ್ದಾರೆ. ಇಲ್ಲಿ ಕಳೆದ ಮೂರುದಿನಗಳಿಂದ ಸ್ಯಾನಿಟೈಸ್ ಮಾಡಲಾಗಿಲ್ಲ. ಸೀಲ್ ಡೌನ್ ಕೂಡ ಮಾಡಿಲ್ಲ, ತರಬೇತಿಗೆ ಬಂದವರು ಮನೆಗೆ ಕೂಡ ಹೋಗುತ್ತಿದ್ದಾರೆ. ಎಲ್ಲ ಕಡೆ ಹರಡುವ ಸಾಧ್ಯತೆ ಇದೆ ಇದಕ್ಕೆ ಯಾರು ಹೊಣೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೋರ್ವರು ಮಾಧ್ಯಮದ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ಹರಡುತ್ತಿದ್ದರೂ ಮುಂಜಾಗ್ರತೆ ವಹಿಸದೇ ಜವಾಬ್ದಾರಿಯುತ ಸ್ಥಾನದಲ್ಲಿರುವವರೇ ದಾರಿ ತಪ್ಪುತ್ತಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.  ಇದೀಗ ಅಧಿಕಾರಿಗಳು ,ಟ್ರೈನಿಗಳು ಆತಂಕದಲ್ಲಿದ್ದಾರೆ. (ಕೆ.ಎಸ್,ಎಸ್.ಎಚ್) (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: