ಮೈಸೂರು

ಕೊರೋನಾ ವಾರಿಯರ್ಸ್ ಗೆ ಆತ್ಮಸ್ಥೈರ್ಯ ತುಂಬಿದ ಷೂ ವರ್ಲ್ಡ್ : ನೆರವು

ಮೈಸೂರು,ಜು.9:-ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ಕೊರೋನಾ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಭೀತಿಹುಟ್ಟಿಸಿದೆ. ಕೊರೋನಾ ವಾರಿಯರ್ ಗಳು(ವೈದ್ಯಕೀಯ ಸಿಬ್ಬಂದಿ) ಮೊದಲ ಹಂತದಲ್ಲೇ ಕೊರೋನಾ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಗರದ ಪ್ರಖ್ಯಾತ ಷೂ ವರ್ಲ್ಡ್ ಕೊರೋನಾ ವಾರಿಯರ್ ಗಳಿಗೆ ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್ ಮೆಂಟ್ ಕಿಟ್ ಹಾಗೂ 150ಅತ್ಯುತ್ತಮ ಗುಣಮಟ್ಟದ ಮಾಸ್ಕ್, ಸ್ಯಾನಿಟೈಸರ್ ಮತ್ತು ಗ್ಲೌಸ್ ಗಳನ್ನು ನೀಡಿದೆ.

ವೈದ್ಯರ ಭವನದಲ್ಲಿಂದು ನಡೆದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಕೊರೋನಾ ವಾರಿಯರ್ ಗಳಿಗೆ ಮಾಸ್ಕ್ ವಿತರಿಸುವ ಮೂಲಕ ಚಾಲನೆ ನೀಡಿದರು. ಷೂ ವರ್ಲ್ಡ್ ಮ್ಯಾನೇಜ್ ಮೆಂಟ್ ಈ ಕಾರ್ಯಮಾಡಲು ನಿಶ್ಚಯಿಸಿದ್ದು ಅತ್ಯುತ್ತಮ ಗುಣಮಟ್ಟದ ಮಾಸ್ಕ್ ಗಳನ್ನು ವಿತರಿಸಲಾಯಿತು. ನ್ಯಾನೋ ಫೋಮ್ ನ ಶುದ್ಧ ಹತ್ತಿಯ ನೂಲಿನಿಂದ ನೇಯ್ಗೆ ಮಾಡಿರುವ ವಸ್ತ್ರವನ್ನು ಬಳಸಿ ತಯಾರಿಸಿರುವ ಮಾಸ್ಕ್ ಗಳು ಯಾವುದೇ ರೀತಿಯ ವೈರಸ್ ಗಳ ಸೋಂಕನ್ನು ತಡೆಯುತ್ತದೆ.

ಷೂ ವರ್ಲ್ಡ್ ನ ಮುಖ್ಯಸ್ಥರಾಗಿರುವ ರವಿಚಂದ್ರ ಮಾತನಾಡಿ ಇದು ಮೈಸೂರಿಗರಿಗಾಗಿ ನಮ್ಮ ಕರ್ತವ್ಯ ಮತ್ತು ಸಣ್ಣ ಸೇವೆ. ಕೊರೋನಾ ಸಂಕಷ್ಟದಲ್ಲಿ ವೈದ್ಯರು, ಪೊಲೀಸ ರು ನರ್ಸ್ ಗಳು ಮತ್ತು ಆಶಾ ಕಾರ್ಯಕರ್ತೆಯರು ಬಹುಮುಖ್ಯವಾಗಿ ಮುಂಚೂಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅವರಿಗೆ ಆತ್ಮಬಲ ನೀಡುವುದರ ಜೊತೆಗೆ  ಉತ್ತಮ ಗುಣಮಟ್ಟದ ಸೌಕರ್ಯ ಒದಗಿಸುವುದೇ ನಾವೆಲ್ಲರೂ ಮಾಡಬಹುದಾದ ಮಹತ್ವದ ಕೆಲಸ. ಇದೇ ಭಾಗವಾಗಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಗ್ಲೌಸ್ ಹಾಗೂ ಪಿಪಿಇ ಕಿಟ್ ನೀಡಿ ನಾವೂ ನಿಮ್ಮೊಂದಿಗಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ನೂರು ಬಾರಿ ಶುಚಿಗೊಳಿಸಿ ಬಳಸಬಹುದಾದ ಮಾಸ್ಕ್ ವಿತರಿಸಲಾಗಿದ್ದು, ತ್ವಚೆಯ ಆರೋಗ್ಯ ಮತ್ತು ಉತ್ತಮ ಉಸಿರಾಟದ ಗಮನವಿರಿಸಿ ವಿನೂತನವಾಗಿ ಪದರಗಳ ವಿಶೇಷ ಮಾಸ್ಕ್ ಇದಾಗಿದೆ. ಉತ್ಪಾದನೆಯ ಹಂತದಿಂದ ಗ್ರಾಹಕರವರೆಗೂ ಮತ್ತು ನಂತರವೂ ಸುರಕ್ಷತೆಯ ಮಾನದಂಡಗಳನ್ನು ಪಾಲಿಸಲಾಗಿದೆ. ಷೂ ವರ್ಲ್ಡ್ ನ ಮಳಿಗೆ ರಾಮಸ್ವಾಮಿ ವೃತ್ತ ಮತ್ತು ಶಿವರಾಂಪೇಟೆಯಲ್ಲಿಯೂ ಅತ್ಯುತ್ತಮ ಮಾಸ್ಕ್ ಗಳು ಲಭ್ಯವಿದೆ. ಎಲ್ಲ ವಯೋಮಿತಿಯವರಿಗೂ ಸರಿ ಹೊಂದುವ ಮಾಸ್ಕ್ ಗಳು ನಮ್ಮಲ್ಲಿ ಲಭ್ಯವಿದೆ. ಈ ಅತ್ಯುತ್ತಮ ಮಾಸ್ಕ್ ಗಳನ್ನು ಸ್ವ್ಕಾರೆಕ್ಸ್ ಕಂಪನಿವತಿಯಿಂದ ತಯಾರಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: