ಮೈಸೂರು

ನಾಳೆ ಕೂಡ ಮೈಸೂರಿನಲ್ಲಿ ನಡೆಯಲ್ಲ ಕೋರ್ಟ್ ಕಲಾಪ

ಮೈಸೂರು,ಜು.9:-  ಮೈಸೂರು ವಕೀಲರ  ಸಂಘದ  ಓರ್ವ ಸದಸ್ಯರಿಗೆ  ಕೊರೋನಾ ಪಾಸಿಟಿವ್ ಕಂಡುಬಂದ  ಸಂಬಂಧ ಬುಧವಾರ ಮತ್ತು ಗುರುವಾರ ಹೊಸ ಮತ್ತು ಹಳೆಯ ಆವರಣದ ಎಲ್ಲಾ  ಕೋರ್ಟ್ ಗಳನ್ನು ಮುಚ್ಚಲಾಗಿತ್ತು.  ಶನಿವಾರ ಮತ್ತು ಭಾನುವಾರ ಸರ್ಕಾರಿ ರಜೆ ಇರುವುದರಿಂದ ಶುಕ್ರವಾರದ ಕಲಾಪಗಳಿಗೆ  ವಕೀಲರು ಹಾಜರಾಗುವುದು ವಕೀಲರ ಆರೋಗ್ಯ ಹಿತದೃಷ್ಟಿಯಿಂದ ಸೂಕ್ತವಲ್ಲವೆಂದು ತಿಳಿದು  ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರೊಂದಿಗೆ ಪರಸ್ಪರ ಚರ್ಚಿಸಿ, ತೀರ್ಮಾನಿಸಿ ಎಲ್ಲಾ ವಕೀಲರು ಕಾರ್ಯಕಲಾಪ ದಿಂದ  ಹೊರಗಡೆ ಉಳಿಯಲು ವಕೀಲರ ಸಂಘದ ಅಧ್ಯಕ್ಷ ಎಸ್.ಆನಂದ್ ಕುಮಾರ್  ವಿನಂತಿಸಿದ್ದಾರೆ.

ನಾಳೆ ಅಂದರೆ ಶುಕ್ರವಾರ ಇರುವಂತ ಕೇಸುಗಳನ್ನು ಯಾವುದೇ ತೊಂದರೆಯಾಗದಂತೆ ಮುಂದೂಡಲು   ಜಿಲ್ಲಾ ನ್ಯಾಯಾಧೀಶರು ಒಪ್ಪಿರುತ್ತಾರೆ. ಆದ್ದರಿಂದ ತಾವು ಆರೋಗ್ಯದ ಹಿತದೃಷ್ಟಿಯಿಂದ ಯಾರೂ ಸಹ ಶುಕ್ರವಾರ ಕೋರ್ಟಿಗೆ  ಬರಬಾರದೆಂದು ವಕೀಲರು ಮತ್ತು ಸಾರ್ವಜನಿಕರಲ್ಲಿ  ವಿನಂತಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: