ಮೈಸೂರು

ಪರಿಸರ ಸ್ನೇಹಿ ತಂಡದ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್  ಅಂಗವಾಗಿ ‘ಮೊಬೈಲ್ ಬಿಡಿ ಗಿಡ ನೆಡಿ’ ಕಾರ್ಯಕ್ರಮ

ಮೈಸೂರು,ಜು.9:- ರಾಷ್ಟ್ರೀಯ ವಿದ್ಯಾರ್ಥಿ ದಿವಸ್  ಅಂಗವಾಗಿ ‘ಮೊಬೈಲ್ ಬಿಡಿ ಗಿಡ ನೆಡಿ’ ಎಂಬ ಕಾರ್ಯಕ್ರಮವನ್ನು ಪರಿಸರ ಸ್ನೇಹಿ ತಂಡದ ವತಿಯಿಂದ ಇಂದು ಗಾಂಧಿನಗರದ ಮೈದಾನದಲ್ಲಿ ಸಸಿಗಳನ್ನು ನೆಡುವ ಮುಖಾಂತರ ಆಚರಿಸಲಾಯಿತು.

ಬಿಜೆಪಿ ಎನ್.ಆರ್.ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷರಾದ ಡಿ.ಲೋಹಿತ್  ಮಾತನಾಡಿ ಈಗಿನ ಕಾಲದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಉಪಯೋಗಿಸುತ್ತ ತಮ್ಮ ಅಮೂಲ್ಯವಾದ ಓದುವ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ .  ಮಕ್ಕಳು ಮೊಬೈಲ್ ಬಳಸಿ ಸ್ವದೇಶಿ ಕ್ರೀಡಾ ಆಟವಾಡುವುದನ್ನು ಸಹ ಮರೆತಿದ್ದಾರೆ.  ಪರಿಸರ ಕಾಳಜಿಯನ್ನು ಮರೆತರೆ ಅವರ ಮುಂದಿನ ಪೀಳಿಗೆಗೆ ತುಂಬಾ ತೊಂದರೆ ಯಾಗುತ್ತದೆ. ಆದ್ದರಿಂದ ಮೊಬೈಲ್ ಬಿಟ್ಟು ಗಿಡ ನೆಟ್ಟರೆ ಪರಿಸರ ಬೆಳೆಸಿ ಉಳಿಸುವಂತಾಗುತ್ತದೆ ಎಂದರು.    ನಗರ ಪಾಲಿಕೆ ಸದಸ್ಯರಾದ  ಅಶ್ವಿನಿ ಶರತ್  ಪತಿ ಶರತ್  ಮಾತನಾಡಿ ದೇಶದ ವಿದ್ಯಾರ್ಥಿಗಳಲ್ಲಿ , ಜ್ಞಾನ ಶೀಲ,ಏಕತೆ ಮೂಲಕ ರಾಷ್ಟ್ರೀಯತೆ ,ಸ್ವಾಭಿಮಾನ, ನಾಯಕತ್ವ ಗುಣಗಳನ್ನು ಬೆಳೆಸುವ ಮೂಲಕ ‘ವಿದ್ಯಾರ್ಥಿ ಶಕ್ತಿ ರಾಷ್ಟ್ರೀಯ ಶಕ್ತಿ’  ಎಂಬುದನ್ನು ಸಾಬೀತು ಪಡಿಸಿ ಕಳೆದ 7 ದಶಕಗಳಲ್ಲಿ ದೇಶದ ವಿವಿಧ ಜ್ವಲಂತ ಸಮಸ್ಯೆಗಳ ವಿರುದ್ದ ಧ್ವನಿಯನ್ನು ಎತ್ತಿ ಪರಿಹಾರವನ್ನು ಹುಡುಕಿದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸ್ಥಾಪನ ದಿನವನ್ನು ರಾಷ್ಟ್ರೀಯ ವಿದ್ಯಾರ್ಥಿ ದಿನವನ್ನಾಗಿ ಆಚರಿಸಲಾಗುತ್ತದೆ . ಎಲ್ಲ ವಿದ್ಯಾರ್ಥಿಗಳಿಗೂ  ರಾಷ್ಟ್ರೀಯ   ವಿದ್ಯಾರ್ಥಿ ದಿನದ ಶುಭಾಶಯಗಳು. ಹಾಗೆಯೇ ಇಂದಿನ ಯುವಕರು  ಪರಿಸರ ಉಳಿಸಿದರೆ ಬಹಳ ಅನುಕೂಲವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ  ಸಹ ಗಿಡ ನೆಟ್ಟರೆ ಪರಿಸರ ಬೆಳೆಸಿ ಉಳಿಸುವಂತಾಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ   ಪರಿಸರ ಸ್ನೇಹಿ ತಂಡದ ಕಾರ್ಯದರ್ಶಿ ಬಿ.ಜಯಂತ್ ಹಾಗೂ ಸಂತೋಷ್,ಪ್ರಮೋದ್,ರವಿ ತೇಜ,ದೀಪು,ನಂಜುಂಡ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: