ಮೈಸೂರು

ಉದ್ಯಮ ಶೀಲತಾ ಯೋಜನೆಯ ಅಡಿಯಲ್ಲಿ ಫಲಾನುಭವಿಗೆ ಕಾರ್ ಕೀ ವಿತರಿಸಿದ ಶಾಸಕ ರಾಮದಾಸ್

ಮೈಸೂರು,ಜು.9:- ನಗರದ ಕಾಡಾ ಕಛೇರಿಯ ಆವರಣದಲ್ಲಿ ಇರುವ ಶಾಸಕರ ಕಛೇರಿಯಲ್ಲಿಂದು ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ಮೈಸೂರು, ಉದ್ಯಮ ಶೀಲತಾ ಯೋಜನೆಯ ಅಡಿಯಲ್ಲಿ ಮೈಸೂರಿನ ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ ಅಶೋಕ ಪುರಂ 5 ನೇಕ್ರಾಸ್, ಡಾ. ಬಿ.ಆರ್. ಅಂಬೇಡ್ಕರ್ ಮುಖ್ಯ ರಸ್ತೆಯ ನಿವಾಸಿಯಾದ  ಮಧುಸೂದನ್  ಅವರಿಗೆ 6 ಲಕ್ಷ ರೂಪಾಯಿಗಳ ಮಾರುತಿ ಸ್ವಿಫ್ಟ್ (ಟೂರ್) ಕಾರ್ ನ ಕೀಲಿ ಕೈ ವಿತರಿಸುವ ಮೂಲಕ ಫಲಾನುಭವಿಯಾದ   ಮಧುಸೂದನ್ ಅವರಿಗೆ ಶಾಸಕರಾದ ಎಸ್.ಎ.ರಾಮದಾಸ್   ಶುಭಕೋರಿದರು.

ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿಯಾದ   ಅನಂತ್ ನಾರಾಯಣ್   ಉಪಸ್ಥಿತರಿದ್ದರು.  (ಜಿ.ಕೆ,ಎಸ್.ಎಚ್)

Leave a Reply

comments

Related Articles

error: