
ಪ್ರಮುಖ ಸುದ್ದಿ
8ಮಂದಿ ಪೊಲೀಸರನ್ನು ಕೊಂದ ಆರೋಪಿ ವಿಕಾಸ್ ದುಬೆ ಜೊತೆ ಕಾನ್ಪುರ್ ತಲುಪಿದ ಪೊಲೀಸರು : 10 ಗಂಟೆಗೆ ನ್ಯಾಯಾಲಯದ ಮುಂದೆ
ದೇಶ(ನವದೆಹಲಿ)ಜು.10:- ಸುದೀರ್ಘ ಶೋಧದ ನಂತರ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಎಂಟು ಪೊಲೀಸರನ್ನು ಕೊಂದ ಪ್ರಮುಖ ಆರೋಪಿ ವಿಕಾಸ್ ದುಬೆ ಅವರನ್ನು ಮಧ್ಯಪ್ರದೇಶದ ಉಜ್ಜಯಿನಿಯ ಮಹಕಲ್ ದೇವಸ್ಥಾನದ ಬಳಿ ಬಂಧಿಸಲಾಗಿದೆ. ಬಂಧನದ ನಂತರ ವಿಕಾಸ್ ದುಬೆ ಯನ್ನು ಮಧ್ಯಪ್ರದೇಶದ ಉಜ್ಜಯಿನಿಯಿಂದ ಯುಪಿಗೆ ಕರೆತರಲಾಗುತ್ತಿದೆ. ವಿಕಾಸ್ ಜೊತೆ ಪೊಲೀಸರು ಕಾನ್ಪುರ ತಲುಪಿದ್ದಾರೆ. ಅಲ್ಲಿ ಬೆಳಿಗ್ಗೆ 10 ಗಂಟೆಗೆ ವಿಕಾಸ್ ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ.
ಎಸ್ಟಿಎಫ್ ವಿಕಾಸ್ ದುಬೆ ಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಲಿದೆ ಎನ್ನಲಾಗುತ್ತಿದೆ. ವಿಕಾಸ್ ಜೊತೆಗೆ, ಆತನ ಪತ್ನಿ ರಿಚಾ ಅವರನ್ನೂ ಕೂಡ ವಿಚಾರಿಸಲಾಗುತ್ತದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)