ಮೈಸೂರು

ಜು.13 : ಸಂತ ಜೋಸಫರ ಕಾಲೇಜಿನಲ್ಲಿ ‘ಬೆಳ್ಳಿತೆರೆಯ ಕಡೆಗೆ ಭರವಸೆಯ ನಡಿಗೆ’: ಆರು ದಿನಗಳ ಚಿತ್ರ ತಯಾರಿಕಾ ಆನ್ ಲೈನ್ ಕಾರ್ಯಾಗಾರ

ಮೈಸೂರು, ಜು.9:-  ಸಂತ ಜೋಸಫರ ಪ್ರಥಮ ದರ್ಜೆ ಕಾಲೇಜು, ಜಯಲಕ್ಷ್ಮೀಪುರಂ, ಮೈಸೂರಿನ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗವು ಜುಲೈ 13ನೇ ತಾರೀಖಿನಿಂದ ‘ಬೆಳ್ಳಿತೆರೆಯ ಕಡೆಗೆ ಭರವಸೆಯ ನಡಿಗೆ’ ಎಂಬ ಚಿತ್ರ ತಯಾರಿಕೆಯ ಬಗೆಗಿನ 6 ದಿನಗಳ ಆನ್ ಲೈನ್ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಿದೆ.

ಈ ಆರು ದಿನಗಳ ಕಾರ್ಯಾಗಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಅನೇಕ ಕಲಾವಿದರು ಹಾಗೂ ತಂತ್ರಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಚಿತ್ರ ತಯಾರಿಕೆಯ ಹಲವು ಆಯಾಮಗಳ ಬಗ್ಗೆ ಮಾತನಾಡಲಿದ್ದಾರೆ. ಕಾರ್ಯಾಗಾರದ ವೇಳಾಪಟ್ಟಿ ಹಾಗೂ ಸಂಪನ್ಮೂಲ ವ್ಯಕ್ತಿಗಳ ವಿವರ ಹೀಗಿದೆ

ಜು.13 ರಂದು      ‘ಸಂಗೀತ ನಿರ್ದೇಶನ’    ಖ್ಯಾತ ಸಂಗೀತ ನಿರ್ದೇಶಕರು ಮತ್ತು  ಚಲನಚಿತ್ರನಿರ್ದೇಶಕರಾದ  ಸಾಧು ಕೋಕಿಲ, ಜು.14ರಂದು ‘ನಟನೆ’ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್,

ಜು.15ರಂದು       ‘ಕಥೆ, ಚಿತ್ರಕಥೆ ಮತ್ತು ಸಂಭಾಷಣೆ’    ಖ್ಯಾತ ಸಿನಿಮಾ ಬರಹಗಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಎಂ ಎಸ್ ರಮೇಶ್, ಜು.16ರಂದು       ‘ಸಾಹಿತ್ಯ’          , ಖ್ಯಾತ ಸಾಹಿತಿ ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ವಿ ನಾಗೇಂದ್ರ ಪ್ರಸಾದ್,ಜು.17ರಂದು ‘ನೃತ್ಯ ಸಂಯೋಜನೆ ಮತ್ತು ನಿರ್ದೇಶನ’ ಖ್ಯಾತ ನೃತ್ಯ ಸಂಯೋಜಕರು ಮತ್ತು ಚಲನಚಿತ್ರ ನಿರ್ದೇಶಕರಾದ ಇಮ್ರಾನ್ ಸರ್ದಾರಿಯಾ, ಜು.18ರಂದು ‘ಸಾಹಸ ನಿರ್ದೇಶನ’ಖ್ಯಾತ ಸಾಹಸ ನಿರ್ದೇಶಕರು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ. ರವಿ ವರ್ಮ ನಡೆಸಿಕೊಡಲಿದ್ದಾರೆ.

ಆರು ದಿನಗಳ ಈ ಕಾರ್ಯಗಾರವು ಚಲನಚಿತ್ರ ತಯಾರಿಕೆಯಲ್ಲಿ ಅಡಗಿರುವ ಸೂಕ್ಷ್ಮತೆ ಹಾಗೂ ಈ ಕ್ಷೇತ್ರದಲ್ಲಿ ವೃತ್ತಿಯನ್ನು ಆರಂಭಿಸಲು ಬೇಕಾಗಿರುವ ಕೌಶಲ್ಯಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪ್ರಸ್ತುತ ಪಡಿಸುವ ವೇದಿಕೆಯಾಗಲಿದೆ. ಚಲನಚಿತ್ರ ಕ್ಷೇತ್ರವನ್ನು ಸೇರಿ ಉತ್ತಮ ಹೆಸರು ಮಾಡಲು ಬಯಸುವ ಎಲ್ಲರೂ ಈ ಕಾರ್ಯಾಗಾರದಲ್ಲಿ ಭಾಗಹಿಸಬಹುದಾಗಿದೆ.

ಆಸಕ್ತರು 96125-63590  ಕ್ಕೆ ಗೂಗಲ್ ಪೇ ಮೂಲಕ 200 ರೂಪಾಯಿಗಳನ್ನು ಪಾವತಿಸಿ ಕಾರ್ಯಾಗಾರಕ್ಕೆ ನೋಂದಾಯಿಸಿಕೊಳ್ಳಬಹುದು. ಕಾರ್ಯಾಗಾರದ ಆರೂ ದಿನಗಳಲ್ಲಿ ಭಾಗವಹಿಸುವ ಎಲ್ಲರಿಗೂ ಈ – ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು.

ಗೂಗಲ್ ಪೇ ನಲ್ಲಿ ತಮ್ಮ ಸಂಪೂರ್ಣ ಹೆಸರು ಮತ್ತು ವಾಟ್ಸ್ಯಾಪ್ ಸಂಖ್ಯೆಯನ್ನು ಕಡ್ಡಾಯವಾಗಿ ಹಾಕಬೇಕು. ಹೆಚ್ಚಿನ ಮಾಹಿತಿಗಾಗಿ ಕಾರ್ಯಕ್ರಮದ ಸಂಯೋಜಕರ ಮೊ.ಸಂ.99725-42599/96119-59497   ಮೂಲಕ ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: