ಕರ್ನಾಟಕಪ್ರಮುಖ ಸುದ್ದಿ

ರಾಜ್ಯದಲ್ಲಿ ಒಂದೇ ದಿನ 2,228 ಮಂದಿಯಲ್ಲಿ ಸೋಂಕು ದೃಢ: ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆ

ಬೆಂಗಳೂರು,ಜು.10-ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ನಿನ್ನೆ ಒಂದೇ ದಿನ 2,228 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 31,105ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ನಿನ್ನೆ 17 ಮಂದಿ ಮೃತಪಟ್ಟಿದ್ದಾರೆ. ಇದರಿಂದ ಮೃತರ ಸಂಖ್ಯೆ 486ಕ್ಕೆ ಏರಿಕೆಯಾಗಿದೆ. 957 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರಿಂದ ಗುಣಮುಖರಾದವರ ಸಂಖ್ಯೆ 12,833ಕ್ಕೆ ಏರಿಕೆಯಾಗಿದೆ. 17,782 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 457 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ವರದಿಯಾಗಿರುವ 2,228 ಸೋಂಕಿನ ಪೈಕಿ ಅರ್ಧದಷ್ಟು ಸೋಂಕು ಬೆಂಗಳೂರಿನಲ್ಲಿಯೇ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 1,373 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದರಿಂದ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 13,883ಕ್ಕೆ ತಲುಪಿದೆ.

ಬೆಂಗಳೂರಿನಲ್ಲಿ ಒಂದೇ ದಿನ 606 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದು ಬೆಂಗಳೂರಿನಲ್ಲಿ ಒಂದೇ ದಿನ ಬಿಡುಗಡೆಯಾದ ಅತೀ ದೊಡ್ಡ ಸಂಖ್ಯೆಯಾಗಿದೆ. ಈ ಮೂಲಕ ಗುಣಮುಖರಾದವರ ಸಂಖ್ಯೆ 2,843ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ 1,373 ಮಂದಿಯಲ್ಲಿ ಸೋಂಕು ಪತ್ತೆಯಾದರೆ, ದಕ್ಷಿಣ ಕನ್ನಡದಲ್ಲಿ 167, ಕಲಬುರಗಿಯಲ್ಲಿ 85, ಧಾರಾವಾಡದಲ್ಲಿ 75, ಮೈಸೂರಿನಲ್ಲಿ 52, ಬಳ್ಳಾರಿಯಲ್ಲಿ 41, ದಾವಣಗೆರೆಯಲ್ಲಿ 40, ಶಿವಮೊಗ್ಗದಲ್ಲಿ 37, ಬಾಗಲಕೋಟೆಯಲ್ಲಿ 36, ಕೋಲಾರದಲ್ಲಿ 34, ಚಿಕ್ಕಬಳ್ಳಾಪುರದಲ್ಲಿ 32, ತುಮಕೂರಿನಲ್ಲಿ 27, ಮಂಡ್ಯದಲ್ಲಿ 24, ಉತ್ತರ ಕನ್ನಡದಲ್ಲಿ 23, ಉಡುಪಿಯಲ್ಲಿ 22, ಹಾಸನದಲ್ಲಿ 21, ಹಾವೇರಿಯಲ್ಲಿ 18, ರಾಮನಗರದಲ್ಲಿ 17, ಯಾದಗಿರಿಯಲ್ಲಿ 16, ರಾಯಚೂರಿನಲ್ಲಿ 16, ಬೆಂಗಳೂರು ಗ್ರಾಮಾಂತರದಲ್ಲಿ 16, ಬೀದರ್ ನಲ್ಲಿ 15, ಚಾಮರಾಜನಗರದಲ್ಲಿ 12, ಬೆಳಗಾವಿಯಲ್ಲಿ 9, ಗದಗದಲ್ಲಿ 6, ಚಿಕ್ಕಮಗಳೂರಿನಲ್ಲಿ 5, ಕೊಡಗಿನಲ್ಲಿ 4, ಕೊಪ್ಪಳ, ಚಿತ್ರದುರ್ಗದಲ್ಲಿ ತಲಾ 2, ವಿಜಯಪುರದಲ್ಲಿ 1 ಪ್ರಕರಣ ವರದಿಯಾಗಿದೆ.

957 ಮಂದಿ ಗುಣಮುಖರಾದವರ ಪೈಕಿ ಬೆಂಗಳೂರಿನಲ್ಲಿ 606 ಮಂದಿ, ಹಾವೇರಿಯಲ್ಲಿ 48 ಮಂದಿ, ಕಲಬುರಗಿಯಲ್ಲಿ 41 ಮಂದಿ, ಬಳ್ಳಾರಿ, ಉತ್ತರ ಕನ್ನಡದಲ್ಲಿ ತಲಾ 38 ಮಂದಿ, ದಕ್ಷಿಣ ಕನ್ನಡದಲ್ಲಿ 36 ಮಂದಿ, ಉಡುಪಿಯಲ್ಲಿ 28 ಮಂದಿ, ರಾಮನಗರದಲ್ಲಿ 27 ಮಂದಿ, ಧಾರಾವಾಡ, ತುಮಕೂರಿನಲ್ಲಿ ತಲಾ 17 ಮಂದಿ, ಹಾಸನದಲ್ಲಿ 16 ಮಂದಿ, ಮಂಡ್ಯದಲ್ಲಿ 15 ಮಂದಿ, ಮೈಸೂರಿನಲ್ಲಿ 14 ಮಂದಿ, ಚಿಕ್ಕಬಳ್ಳಾಪುರ, ವಿಜಯಪುರದಲ್ಲಿ ತಲಾ 6 ಮಂದಿ, ದಾವಣಗೆರೆಯಲ್ಲಿ ನಾಲ್ಕು ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರಿನಲ್ಲಿ ಸೋಂಕಿತರ ಸಂಪರ್ಕ ಪತ್ತೆಹಚ್ಚುವ ಕಾರ್ಯ ಹೆಚ್ಚಬೇಕಿದೆ. ನಗರದಲ್ಲಿ ಈ ಕಾರ್ಯ ಶೇ.100ರಷ್ಟು ನಡೆಯುತ್ತಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದ ಸಂಪರ್ಕ ಪತ್ತೆಹಚ್ಚುತ್ತಿರುವ ಜನರೇ ಈಗಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ಥಳೀಯ ಮಾದರಿ ಹಾಗೂ ಬೂತ್ ಮಟ್ಟದ ಸಂಪರ್ಕ ಪತ್ತೆಹಚ್ಚಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಹೇಳಿದ್ದಾರೆ.

ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.1.49ರಷ್ಟಿದ್ದರೆ, ಬೆಂಗಳೂರಿನಲ್ಲಿನ 1.28ರಷ್ಟಿದೆ. ನಿನ್ನೆ ಸಾವನ್ನಪ್ಪಿದ್ದ 17 ಮಂದಿ ಸಾರಿ ಅಥವಾ ಐಎಲ್‌ಐ ಪ್ರಕರಣಗಳಾಗಿವೆ ಎಂದಿದ್ದಾರೆ. (ಎಂ.ಎನ್)

 

Leave a Reply

comments

Related Articles

error: