
ಮೈಸೂರು
ಪ್ರಾವಿಷನ್ ಮಳಿಗೆ ಬಾಗಿಲು ಮುರಿದು ಕಳ್ಳತನ
ಮೈಸೂರು,ಜು.10:- ಪ್ರಾವಿಷನ್ ಮಳಿಗೆಯೊಂದರ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಮಳಿಗೆಯಲ್ಲಿದ್ದ ಹತ್ತು ಸಾವಿರ ರೂ.ನಗದನ್ನು ದೋಚಿ ಪರಾರಿಯಾದ ಘಟನೆ ವಿದ್ಯಾರಣ್ಯಪುರಂ 4ನೇ ಮೇನ್ ನ ಸೀವೆಜ್ ಫಾರಂ ರಸ್ತೆಯಲ್ಲಿ ನಡೆದಿದೆ.
ಬಿ.ಕೆ.ಗಣೇಶ್ ಎಂಬವರಿಗೆ ಸೇರಿದ ಪ್ರಾವಿಷನ್ ಸ್ಟೋರ್ ನ ರೋಲಿಂಗ್ ಶೆಟರ್ ಮೀಟಿ ಕಳ್ಳರು ಒಳನುಗ್ಗಿ ಕಳ್ಳತನ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದು, ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)