ಪ್ರಮುಖ ಸುದ್ದಿವಿದೇಶ

ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಲ್ಲೇ ದಕ್ಷಿಣ ಕೊರಿಯಾದ ಪ್ರಭಾವಿ ರಾಜಕಾರಣಿ ಆತ್ಮಹತ್ಯೆಗೆ ಶರಣು

ಸಿಯೋಲ್‌ (ದಕ್ಷಿಣ ಕೊರಿಯಾ),ಜು.10-ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ಮರುದಿನವೇ ದಕ್ಷಿಣ ಕೊರಿಯಾದ ಸಿಯೋಲ್ ನಗರದ ಮೇಯರ್ ಪಾರ್ಕ್ ವೋನ್ ಸೂನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದಕ್ಷಿಣ ಕೊರಿಯಾದ ಮುಂದಿನ ಅಧ್ಯಕ್ಷಿಯ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಪಾರ್ಕ್ ವೋನ್‌ ಸೂನ್‌ ಮೃತದೇಹ ನಗರದ ಬೆಟ್ಟದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೆತ್ ನೋಟ್ ನಲ್ಲಿ ಭಾವನಾತ್ಮಕ ವಿದಾಯ ಹೇಳಿರುವ ವೋನ್‌ ಸೂನ್‌, ಎಲ್ಲರಿಗೂ ಕ್ಷಮೆ ಯಾಚಿಸಿದ್ದಾರೆ. ಜೊತೆಗೆ ಅವರ ಜೀವನಲ್ಲಿ ಜೊತೆಯಾದವರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದು, ತನ್ನ ಅಂತ್ಯ ಸಂಸ್ಕಾರದ ನಂತರ ತನ್ನ ಚಿತಾಭಸ್ಮವನ್ನು ಹೆತ್ತವರ ಸಮಾಧಿ ಬಳಿ ಹಾಕಿ ಎಂದು ಕೇಳಿಕೊಂಡಿದ್ದಾರೆ.ಕೊನೆಯಲ್ಲಿ ಎಲ್ಲರಿಗೂ ವಿದಾಯ ಎಂದು ಹೇಳಿ ಡೆತ್‌ನೋಟ್‌ ಬರಹ ಮುಗಿಸಿದ್ದು, ಆರೋಪಗಳ ಬಗ್ಗೆ ಯಾವುದೇ ಅಂಶವನ್ನು ಡೆತ್ ನೋಟ್ ನಲ್ಲಿ ಅವರು ಉಲ್ಲೇಖಿಸಿಲ್ಲ.

ಮಾನವ ಹಕ್ಕುಗಳ ವಕೀಲರಾಗಿ ಸೇವೆ ಸಲ್ಲಿಸಿ, ದಕ್ಷಿಣ ಕೊರಿಯಾದ ಪ್ರಭಾವಿ ರಾಜಕಾರಣಿಯಾಗಿ ವೋನ್‌ ಸೂನ್‌ ಬೆಳೆದಿದ್ದರು. ಆದರೆ, ಮೀಟೂ ಅಭಿಯಾನದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಲಾಗಿತ್ತು. ಆರೋಪ ಕೇಳಿಬಂದ ಮರುದಿನವೇ ಪಾರ್ಕ್‌ ಮೃತದೇಹ ಪತ್ತೆಯಾಗಿದೆ. ಅವರ ಅಧಿಕೃತ ನಿವಾಸದಲ್ಲಿ ಡೆತ್‌ ನೋಟ್‌ ಕೂಡ ಸಿಕ್ಕಿದ್ದು, ಆತ್ಮಹತ್ಯೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಪಾರ್ಕ್‌ ವೋನ್‌ ಸೂನ್‌ ಮೇಲೆ ಅವರ ಮಾಜಿ ಕಾರ್ಯದರ್ಶಿ ಲೈಂಗಿಕ ದೌರ್ಜನ್ಯದ ಆರೋಪವನ್ನು ಬುಧವಾರ ಹೋರಿಸಿ ಪೊಲೀಸ್‌ ದೂರು ಕೂಡ ಸಲ್ಲಿಸಿದ್ದರು. ಕಾರ್ಯದರ್ಶಿ ಸಲ್ಲಿಸಿದ ದೂರಿನಲ್ಲಿ 2015 ರಿಂದ ನಾನು ವೋನ್‌ ಸೂನ್‌ ಅವರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ, ಕೆಲಸದ ಅವಧಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಅನುಚಿತವಾಗಿ ವರ್ತಿಸಿದ್ದಾರೆ. ಜೊತೆಗೆ ಕಚೇರಿ ಕೆಲಸದ ನಂತರ ಅಸಭ್ಯ ಸೆಲ್ಫಿಗಳನ್ನು ಕಳುಹಿಸುತ್ತಿದ್ದರು ಎಂದು ಆರೋಪ ಮಾಡಿದ್ದರು.

ದಕ್ಷಿಣ ಕೊರಿಯಾದಲ್ಲಿ ಸದ್ಯ ಆಡಳಿತದಲ್ಲಿರುವ ಪಕ್ಷದಲ್ಲಿ ಪ್ರಮುಖ ನಾಯಕರಾಗಿ ಪಾರ್ಕ್‌ ಬೆಳೆದಿದ್ದರು. ಜೊತೆಗೆ ದಕ್ಷಿಣ ಕೊರಿಯಾದ ರಾಜಧಾನಿಯ ಆಡಳಿತದ ಚುಕ್ಕಾಣಿಯನ್ನು ಪಾರ್ಕ್ ವೋನ್‌ ಸೂನ್‌ ಹಿಡಿದಿದ್ದರು. ಲಿಂಗ ಹಾಗೂ ಸಾಮಾಜಿಕ ಸಮಾನತೆಯ ಅಂಶಗಳ ಪ್ರಚಾರದಿಂದಲೇ ಮೂರು ಬಾರಿ ಚುನಾವಣೆಯನ್ನು ಪಾರ್ಕ್‌ ವೋನ್‌ ಸೂನ್‌ ಗೆದ್ದಿದ್ದರು. 2022ರಲ್ಲಿ ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷಿಯ ಚುನಾವಣೆಯ ನಿಗದಿಯಾಗಿತ್ತು. ಹಾಲಿ ಅಧ್ಯಕ್ಷ ಮೂನ್‌ ಜಾಯ್‌ ಇನ್‌ ಅವರ ಉತ್ತರಾಧಿಕಾರಿ ಪಟ್ಟಿಯಲ್ಲಿ ಪಾರ್ಕ್‌ ವೋನ್‌ ಸೂನ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿತ್ತು. (ಎಂ.ಎನ್)

 

Leave a Reply

comments

Related Articles

error: