ಮೈಸೂರು

ರಾಷ್ಟ್ರಮಟ್ಟದ 50ಜೋಡಿಗಳ ಕುಸ್ತಿ ಪಂದ್ಯಾವಳಿಗೆ ಚಾಲನೆ

ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಮೈಸೂರು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ.ರೇವಣ್ಣ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ರಾಷ್ಟ್ರಮಟ್ಟದ 50 ಜೋಡಿಗಳ ಕುಸ್ತಿ ಪಂದ್ಯಾವಳಿಗೆ ತುಮಕೂರಿನ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಮಹಾಸ್ವಾಮೀಜಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕುಸ್ತಿ ದೇಶೀಯ ಹೆಮ್ಮೆಯ ಕ್ರೀಡೆಯಾಗಿದೆ. ಸಂಘ-ಸಂಸ್ಥೆಗಳು ಮಾತ್ರ ಕುಸ್ತಿಯನ್ನು ಪ್ರೋತ್ಸಾಹಿಸದೆ ಸರಕಾರವೂ ಹೆಚ್ಚಿನ ಉತ್ತೇಜನ ನೀಡಿ ಪ್ರೋತ್ಸಾಹಿಸಬೇಕು ಎಂದರು.

ಸಂಸದ ಸಿ.ಎಸ್.ಪುಟ್ಟರಾಜು, ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ, ಮೈಸೂರು ಲಾರಿ ಮಾಲೀಕರ ಸಂಘದ ಬಿ.ರೇವಣ್ಣ ಶಾಸಕ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ ಕುಸ್ತಿ ಪಟುಗಳು ಆಗಮಿಸಿ ಕುಸ್ತಿಯಲ್ಲಿ ಪಂದ್ಯಾಟದಲ್ಲಿ ಕುಸ್ತಿ ಪ್ರದರ್ಶಿಸಿದರು. (ಬಿ.ಎಂ-ಎಸ್.ಎಚ್)

Leave a Reply

comments

Related Articles

error: