ಪ್ರಮುಖ ಸುದ್ದಿ

ಸಿಇಟಿ ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ 30 ಮತ್ತು 31ರಂದು ನಡೆಯಲಿವೆ : ಡಾ.ಸಿ.ಎನ್. ಅಶ್ವತ್ಥನಾರಾಯಣ

ರಾಜ್ಯ(ಬೆಂಗಳೂರು)ಜು.10:- ಸಿಇಟಿ ಪರೀಕ್ಷೆಗಳು ನಿಗದಿಯಂತೆ ಇದೇ ತಿಂಗಳ 30 ಮತ್ತು 31ರಂದು ನಡೆಯಲಿವೆ ಎಂದು ಉನ್ನತ ಶಿಕ್ಷಣ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.

ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸಿಇಟಿ ಘಟಕ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಪಿಜಿ‌ ಸಿಇಟಿ ಆಗಸ್ಟ್ 8 ಮತ್ತು 9 ನಡೆಯಲಿದೆ.‌ ಆಗಸ್ಟ್ 9 ರಂದು ಡಿಪ್ಲೋಮಾ ‌ಸಿಇಟಿ‌ ನಡೆಯಲಿದೆ. ಕೆ-ಸೆಟ್ ಪರೀಕ್ಷೆಗಳ‌ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ ಎಂದು ಅವರು ಹೇಳಿದರು.

ಪರೀಕ್ಷೆ ತಡ ಮಾಡಿದರೆ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಈ ಹಿನ್ನಲೆಯಲ್ಲಿ ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸಿ ಪರೀಕ್ಷೆ ನಡೆಸಲಾಗುವುದು. ಸಮರ್ಪಕ ಸ್ಯಾನಿಟೈಸೇಷನ್ ಮತ್ತು ಸಾಮಾಜಿಕ ಅಂತರಕ್ಕೆ ಧಕ್ಕೆ ಆಗದ ಹಾಗೆ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: