
ಮೈಸೂರು
ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಮೈಸುರು,ಜು.10:- ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಮೈಸೂರು ಜಿಲ್ಲಾ ಶಾಖೆಯ ವತಿಯಿಂದ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಆಗಿದ್ದ ಬಿ.ಕೆ.ಚಂದ್ರಮೌಳೇಶ್ವರ ಅವರ ಹತ್ಯೆಯನ್ನು ಖಂಡಿಸಿ ಇಂದು ಕಪ್ಪಪಟ್ಟಿಯನ್ನು ಧರಿಸಿ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಅವರ ಮುಖಾಂತರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಕಛೇರಿಯಲ್ಲಿ ನಿಕಟಪೂರ್ವ ರಾಜ್ಯಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರಾದ ಹೆಚ್.ಕೆ.ರಾಮು ನೇತೃತ್ವದಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಸೇರಿ 2 ನಿಮಿಷ ಮೌನಚಾರಣೆಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಆರ್. ಬಾಲಕೃಷ್ಣ. ಗೌರವಾಧ್ಯಕ್ಷರು, ಜೆ.ಗೋವಿಂದರಾಜು. ಕಾರ್ಯದರ್ಶಿ, ಸಿ.ಎಸ್.ರಮೇಶ್ ಕುಮಾರ್ ಖಜಾಂಚಿ, ಉಪಾಧ್ಯಕ್ಷರಾದ. ಆನಂದ.ಡಿ, ಪದಾಧಿಕಾರಿಗಳಾದ,ಯಧುಗಿರೀಶ್, ಪುಟ್ಟಮಾದೇಗೌಡ, ರಘು, ರೇವಣ್ಣ, ಭಾಸ್ಕರ್, ಗಿರೀಶ್, ಶಿವಕುಮಾರ್. ವಸಂತ್,ಬದ್ರಿನಾರಾಯಣ್, ನವೀನ್, ಕಂದಾಯ ಇಲಾಖೆಯ ನೌಕರರ ಸಂಘ, ಅದ್ಯಕ್ಷರು ಪದಾಧಿಕಾರಿಗಳು ಹಾಜರಿದ್ದರು. (ಜಿ.ಕೆ,ಎಸ್.ಎಚ್)