ಮೈಸೂರು

ಕೊರೊನಾ ವಾರಿಯರ್ಸ್ ಗೆ ಕೆನೆರಾ ಬ್ಯಾಂಕ್ ವತಿಯಿಂದ ಮಾಸ್ಕ್, ಕೈಗವಸು, ಸ್ಯಾನಿಟೈಸರ್ ವಿತರಣೆ

ಮೈಸೂರು,ಜು.11-ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ವಾರಿಯರ್ಸ್ ಗಳಾಗಿ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿದ್ದಾರ್ಥನಗರ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕೆನೆರಾ ಬ್ಯಾಂಕ್ ವತಿಯಿಂದ ಮಾಸ್ಕ್, ಕೈ ಗವಸು, ಸ್ಯಾನಿಟೈಸರ್ ಅನ್ನು ವಿತರಿಸಲಾಯಿತು.

ಬ್ಯಾಂಕ್ ನ ಮಂಡಲ ಪ್ರಬಂಧಕರಾದ ಎಚ್.ಎಲ್.ಸತೀಶ್ ಅವರು ಇತ್ತೀಚೆಗೆ ಸಿದ್ದಾರ್ಥನಗರ ಟ್ರಾಫಿಕ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಬಸವರಾಜು ಅವರಿಗೆ 150 ಎನ್ 95 ಮಾಸ್ಕ್, 100 ಕೈಗವಸು, 5 ಲೀಟರ್ ನ ಮೂರು ಕ್ಯಾನ್ ಸ್ಯಾನಿಟೈಸರ್ ಅನ್ನು ನೀಡಿದರು. (ಎಚ್.ಎನ್, ಎಂ.ಎನ್)

 

 

Leave a Reply

comments

Related Articles

error: