ಮೈಸೂರು

ಎನ್ ಆರ್ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ; ಒಂದು ವಾರ ಮಿನಿ ಲಾಕ್ಡೌನ್ ಗೆ ಚಿಂತನೆ ; ಅಭಿರಾಮ್ ಜಿ.ಶಂಕರ್

ಮೈಸೂರು,ಜು.11:- ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ  ಎನ್. ಆರ್. ಕ್ಷೇತ್ರದಲ್ಲಿ ಒಂದು ವಾರ ಮಿನಿ ಲಾಕ್ಡೌನ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಮಾಹಿತಿ ನೀಡಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಅವರು ಎನ್.ಆರ್. ಕ್ಷೇತ್ರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. ಕೇವಲ 200, 300ಮೀಟರ್ ಗಳಲ್ಲಿ ಸೋಂಕಿನಿಂದ 4 ಮಂದಿ  ಸಾವಿಗೀಡಾಗಿದ್ದಾರೆ. ಆ ಭಾಗಗಳಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗಿದೆ. ಹೀಗಾಗಿ ಅಲ್ಲಿ ಒಂದು ವಾರಗಳ ಕಾಲ ಮಿನಿ ಲಾಕ್ ಡೌನ್ ಮಾಡಲು ತೀರ್ಮಾನ ಮಾಡಲಾಗಿದೆ. ಆಯ್ದ ಕೆಲಭಾಗಗಳಲ್ಲಿ ಲಾಕ್ಡೌನ್ ಮಾಡಿ ಮನೆಮನೆಗೆ ತೆರಳಿ ಸರ್ವೆ ಮಾಡಲು ಸಿದ್ದತೆ ನಡೆಸಲಾಗಿದೆ ಎಂದು ತಿಳಿಸಿದರು.

ಸುಭಾಷ್ ನಗರ, ಕಲ್ಯಾಣಗಿರಿ, ಉದಯಗಿರಿ ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಈ ಬಗ್ಗೆ ಸ್ಥಳೀಯ ಮುಖಂಡರು ಹಾಗೂ ಧಾರ್ಮಿಕ ಮುಖಂಡರ ಸಭೆ ನಡೆಸಲಾಗಿದೆ. ಎಲ್ಲರೂ ಸಹಕಾರ ‌ನೀಡುವುದಾಗಿ ಹೇಳಿದ್ದಾರೆ. ಇದರಲ್ಲಿ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗೆ ಸ್ಥಳೀಯರ ಸಹಕಾರ ಬೇಕಿದೆ ಎಂದು ಮನವಿ ಮಾಡಿದರು.

ಮೈಸೂರಿಗೆ ರ್ಯಾಪಿಡ್ ಆಂಟಿ ಜೆನ್ ಕಿಟ್ ನೀಡಲಾಗಿದೆ. ಮೈಸೂರು ಜಿಲ್ಲೆಗೆ 2300ಕಿಟ್ ನೀಡಲಾಗಿದ್ದು, ಕೇವಲ 45 ನಿಮಿಷಗಳಲ್ಲಿ ಪಾಸಿಟಿವ್, ನೆಗೆಟಿವ್ ವರದಿ ಸಿಗಲಿವೆ. ಸೋಂಕು ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಕಿಟ್ ಬಳಕೆ ಮಾಡಲಾಗುತ್ತದೆ. ಆ ವಲಯಗಳಲ್ಲಿ ಕ್ಯಾಂಪ್ ಮಾಡಿ ಟೆಸ್ಟ್‌ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಮೈಸೂರು ಕೊರೋನಾ ವಾರಿಯರ್ಸ್‌‌ಗೆ ಪ್ರತ್ಯೇಕ ಆಸ್ಪತ್ರೆ

ಕೊರೋನಾ ತಡೆಗಟ್ಟಲು ಹಗಲಿರುಳು ಕೆಲಸ ಮಾಡುತ್ತಿರುವ ಮೈಸೂರು ಕೊರೋನಾ ವಾರಿಯರ್ಸ್‌‌ಗೆ ಪ್ರತ್ಯೇಕ ಆಸ್ಪತ್ರೆ ತೆರೆಯಲಾಗುತ್ತದೆ. ಮೈಸೂರಿನ ವಿಕ್ರಂ ಆಸ್ಪತ್ರೆಯಲ್ಲಿ ಕೊರೋನಾ ವಾರಿಯರ್ಸ್‌‌ಗೆ ಚಿಕಿತ್ಸೆ ನೀಡಲಾಗುತ್ತದೆ. ಈಗಾಗಲೆ 90 ಬೆಡ್‌ಗಳ ಆಸ್ಪತ್ರೆ ಸಿದ್ದವಾಗಿದೆ. ಖಾಸಗಿ ಆಸ್ಪತ್ರೆಯವರ ಸಹಭಾಗಿತ್ವದಲ್ಲಿ ಎಲ್ಲಾ ಸಿದ್ದವಾಗಿದೆ. ಕೊರೋನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಅವರಿಗೆ ವಿಶೇಷ ಸೇವೆ ನೀಡುವುದು ನಮ್ಮ ಕರ್ತವ್ಯ ಎಂದು  ಹೇಳಿದರು.(ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: