ಮೈಸೂರು

ದೇವರ ತಟ್ಟೆಯಲ್ಲಿದ್ದ ಹಣ ಕಳುವು

ಯಾರೂ ಇಲ್ಲದ ವೇಳೆಯಲ್ಲಿ ಕಳ್ಳತನ ನಡೆಸಿರೋದನ್ನು ಕೇಳಿದ್ದೇವೆ. ಆದರೆ ದೇವರ ಪೂಜೆಗೆಂದು ಬಂದ ಭಕ್ತ ಮಹಾಶಯನೊಬ್ಬ ಮಂಗಳಾರತಿ ತಟ್ಟೆಯಲ್ಲಿದ್ದ ಹಣಕ್ಕೆ ಆಸೆಬಿದ್ದು ದೇವರನ್ನೇ ಮರೆತು ಹಣ ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ಮಂಡ್ಯಜಿಲ್ಲೆಯಲ್ಲಿ ನಡೆದಿದೆ.

ಮಂಡ್ಯಜಿಲ್ಲೆಯ ಮದ್ದೂರಿನ ಹೊಳೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮೂರು ದಿನಗಳ ಹಿಂದೆ ಭಕ್ತನೊಬ್ಬ ಬಂದಿದ್ದು, ದೇವರಿಗೆ ಕೈಮುಗಿಯುವ ವೇಳೆ ಪಕ್ಕದಲ್ಲೇ ಇದ್ದ ಮಂಗಳಾರತಿ ತಟ್ಟೆ ಕಣ್ಣಿಗೆ ಬಿದ್ದಿದೆ. ತನ್ನ ಆಚೆ ಈಚೆ ಗಮನಿಸಿದ ಈತ ತನ್ನ ಸುತ್ತಮುತ್ತ ಯಾರೂ ಇಲ್ಲ ಎಂಬುದನ್ನು ಗಮನಿಸಿ ಮಂಗಳಾರತಿ ತಟ್ಟೆಗೆ ಕೈಹಾಕಿ ಅದರಲ್ಲಿದ್ದ ಹಣವನ್ನು ಎಗರಿಸಿದ್ದಾನೆ. ಇದು ದೇವಸ್ಥಾನದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ಈ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: