ಮೈಸೂರು

ಪತಿ ಅಗಲಿಕೆಯಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣು

ಮೈಸೂರು,ಜು.12:-  ಪತಿ ಅಗಲಿಕೆಯಿಂದ ಬೇಸತ್ತು ಗೃಹಿಣಿ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಜೆ.ಪಿ.ನಗರದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಚಾಂದಿನಿ (25) ಎಂದು ಹೇಳಲಾಗಿದೆ.    21 ದಿನಗಳ ಹಿಂದೆ ಇವರ ಪತಿ ಮಧುಸೂದನ್ ಮೃತ ಪಟ್ಟಿದ್ದರು. 5 ವರ್ಷಗಳ ಹಿಂದೆ ಚಾಂದಿನಿ ಹಾಗೂ ಮಧುಸೂದನ್ ವಿವಾಹ ನಡೆದಿತ್ತು. ಚಾಂದಿನಿಗೆ ಮತ್ತೊಂದು ಮದುವೆ ಮಾಡಲು  ಪೋಷಕರು ನಿರ್ಧರಿಸಿದ್ದರು. ಆದರೆ ಪತಿ ನೆನಪಿನಿಂದ ಹೊರಬರಲಾಗದ ಚಾಂದಿನಿ  ಪೋಷಕರ ನಿರ್ಧಾರಕ್ಕೆ ಬೇಸತ್ತು ನೇಣಿಗೆ ಶರಣಾಗಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: