ಮೈಸೂರು

ರಂಗಭೂಮಿ ಒಗ್ಗೂಡಿಸುವ ಕೆಲಸ ಮಾಡುತ್ತಿದೆ : ರಾಮೇಶ್ವರಿ ವರ್ಮಾ

ರಂಗಭೂಮಿ ನಾವೆಲ್ಲ ಒಂದು ಎನ್ನುವ ವಿಶ್ವಮಾನವ ಸಂದೇಶವನ್ನು ನೀಡುತ್ತಿದೆ ಎಂದು ರಂಗಕರ್ಮಿ ರಾಮೇಶ್ವರಿ ವರ್ಮಾ ಹೇಳಿದರು.

ಮೈಸೂರು ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಲಾದ ವಿಶ್ವರಂಗಭೂಮಿ ದಿನಾಚರಣೆಯನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರಸ್ತುತ ದಿನಗಳಲ್ಲಿ ಮೂಲಭೂತವಾದಿಗಳ ಮನಸುಗಳು ಸಮಾಜದಲ್ಲಿ ಬಿರುಕುಗಳನ್ನು ಉಂಟುಮಾಡುತ್ತಿವೆ. ಒಗ್ಗಟ್ಟನ್ನು ಮುರಿಯುತ್ತಿವೆ. ಇಂಥಹ ಸಮಯದಲ್ಲಿ ರಂಗಭೂಮಿ ನಾವೆಲ್ಲರೂ ಒಂದು ಎಂಬ ಸಂದೇಶವನ್ನು ನೀಡುವ ಮೂಲಕ ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗಕರ್ಮಿಗಳಾದ ಮೈಮ್ ರಮೇಶ್, ಕೆ.ಆರ್.ಸುಮತಿ, ವೇದಿಕೆಯ ಅಧ್ಯಕ್ಷ ಸುರೇಶ್ ಬಾಬು ಮತ್ತಿತರರು ಉಪಸ್ಥಿತರಿದ್ದರು. ಬಿ.ಆರ್.ರಾಘವೇಂದ್ರ ಮತ್ತು ತಂಡದವರು ರಂಗಗೀತೆಗಳ ಗಾಯನ ನಡೆಸಿಕೊಟ್ಟರು. (ಎಸ್.ಎಚ್)

Leave a Reply

comments

Related Articles

error: