ಪ್ರಮುಖ ಸುದ್ದಿ

ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್, ಪುತ್ರಿ ಆರಾಧ್ಯ ಕೊರೋನಾ ವರದಿ ಕೂಡ ಪಾಸಿಟಿವ್

ದೇಶ( ನವದೆಹಲಿ)ಜು.13:- ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಹಾಗೂ ಖ್ಯಾತ ನಟ ಅಭಿಷೇಕ್ ಬಚ್ಚನ್ ಅವರ ಕೊರೋನಾ ವರದಿ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರ ಕುಟುಂಬ ಸದಸ್ಯರ ಪ್ರತಿ ಎಲ್ಲರ ಆತಂಕ ಹೆಚ್ಚಾಗಿತ್ತು. ಆದರೆ ನಟ ಅಭಿಷೇಕ್ ಬಚ್ಚನ್ ಪತ್ನಿ ಐಶ್ವರ್ಯಾ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಬಚ್ಚನ್ ಅವರಿಗೂ ಕೂಡ ಕೊರೋನಾ ವೈರಸ್ ಇರುವುದು ದೃಢವಾಗಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ಬಿಎಂಸಿ ಅಸಿಸ್ಟೆಂಟ್ ಕಮಿಷನರ್ ವಿಶ್ವಾಸ್ ಮೋಟೆ ಐಶ್ವರ್ಯ ರೈ ಬಚ್ಚನ್ ಹಾಗೂ ಅವರ ಪುತ್ರಿ ಆರಾಧ್ಯಾ ಇಬ್ಬರ ಕೊರೋನಾ ವರದಿಗಳೂ ಕೂಡ ಪಾಸಿಟಿವ್ ಬಂದಿವೆ ಎಂದಿದ್ದಾರೆ. ಈ ವರದಿಯ ಬಳಿಕ ಇದೀಗ ಅವರ ಅಭಿಮಾನಿಗಳ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಇದು ಐಶ್ವರ್ಯಾ ಹಾಗೂ ಆರಾಧ್ಯಾ ಅವರ ಎರಡನೇ ವರದಿಯಾಗಿದ್ದು, ಮೊದಲ ಸ್ವಾಬ್ ಟೆಸ್ಟ್ ವರದಿಯಲ್ಲಿ ಇಬ್ಬರೂ ನೆಗೆಟಿವ್ ಇತ್ತು. ಅವರ ಎರಡನೇ ವರದಿ ಪ್ರಕಟಗೊಂಡಿದ್ದು, ಎರಡನೇ ವರದಿಯಲ್ಲಿ ಪಾಸಿಟಿವ್ ಬಂದಿದೆ ಎನ್ನಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: